ಸಿದ್ದಾಪುರ: ಶಾಲೆಗೆ ಹೋಗಲು ಬಸ್ಸು ಹತ್ತಿದ್ದ ವಿದ್ಯಾರ್ಥಿ ಜೊತೆ ಕೆಎಸ್‌ಆರ್‌ಟಿಸಿ ನೌಕರರೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ. ಇದನ್ನು ಖಂಡಿಸಿ ಜನ ಸಾರಿಗೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು.
ಮುoಡಗೆತೆಗ್ಗಿoದ ಸಿದ್ದಾಪುರಕ್ಕೆ ಬಂದಿದ್ದ ಮದನ ಲೋಕೇಶ ನಾಯ್ಕ ಶಿರವಂತೆಯ ಶಾಲೆಗೆ ಹೋಗಬೇಕಿತ್ತು. ಅಲ್ಲಿ ಅವರು 8ನೇ ತರಗತಿ ವಿದ್ಯಾರ್ಥಿಯಾಗಿದ್ದರು. ಇದಕ್ಕಾಗಿ ಆ ವಿದ್ಯಾರ್ಥಿ ಶಿರಸಿ – ಸಿದ್ದಾಪುರ – ಸಾಗರ ಬಸ್ ಹತ್ತಿದ್ದರು.
ಆದರೆ, ಬಸ್ಸಿನ ನಿರ್ವಾಹಕ ಆ ವಿದ್ಯಾರ್ಥಿಯನ್ನು ಅನಗತ್ಯವಾಗಿ ನಿಂದಿಸಿ ತಳಿಸಿದ್ದಲ್ಲದೇ, ಬಸ್ಸಿನಿಂದ ಹೊರದಬ್ಬಿದ್ದಾರೆ. ಬಸ್ಸು ಅರೆಂದೂರ್ ಬಳಿ ತಲುಪಿದಾಗ ವಿದ್ಯಾರ್ಥಿಯನ್ನು ಕೆಳಗಿಳಿಸಿದ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಬಸ್ಸು ಸಿಬ್ಬಂದಿ ವರ್ತನೆ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರಿಗೆ ಸಿಬ್ಬಂದಿ ವಿರುದ್ಧ ದೂರು ದಾಖಲಿಸುವುದಾಗಿ ಪಾಲಕರು ಹೇಳಿದ್ದಾರೆ.




