ಭಟ್ಕಳ: ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ಹೋಗಿದ್ದ ಮೀನುಗಾರ ದೋಣಿಯಲ್ಲಿಯೇ ಸಾವನಪ್ಪಿದ್ದಾನೆ.
ಶಿರಾಲಿ ಮಾವಿನಕೂರ್ವಾ ಅಳ್ವೆಕೊಡಿ ಸಣ್ಣಬಾವಿ ಬಳಿಯ ನರಸಿಂಹ ಧರ್ಮಾ ಮೊಗೇರ (49) ಗುರುವಾರ ಬೆಳಗ್ಗೆ 5.30ಕ್ಕೆ ಎದ್ದು ಮೀನುಗಾರಿಕೆಗೆ ಹೋಗಿದ್ದರು. ಮೀನು ಹಿಡಿಯುವ ವೇಳೆ ತಲೆಸುತ್ತು ಬಂದು ದೋಣಿಯಲ್ಲಿ ಬಿದ್ದ ಅವರು ಮತ್ತೆ ಮೇಲೆ ಏಳಲಿಲ್ಲ.
ನರಸಿಂಹರ ಅಣ್ಣನ ಮಗಳು ತೃಪ್ತಿ ಮೊಗೇರ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.