ಕುಮಟಾ: ತೋಟಕ್ಕೆ ಹೋಗಿದ್ದ ರಾಘವೇಂದ್ರ ಭಟ್ಟ ಅವರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ.
ಕೂಜಳ್ಳಿ ಬಚಕಂಡದ ರಾಘವೇಂದ್ರ ವಿದ್ಯಾಧರ ಭಟ್ಟ (42) ಗುರುವಾರ ಬೆಳಗ್ಗೆ 8.30ಕ್ಕೆ ತೋಟಕ್ಕೆ ಹೋಗಿದ್ದರು. ಅಲ್ಲಿ ತೆಂಗಿನ ಕಾಯಿ ಬಿದ್ದಿದ್ದು, ಅದನ್ನು ಹೆಕ್ಕುತ್ತಿದ್ದರು. ತೋಟದಲ್ಲಿದ್ದ ತೆರದ ಬಾವಿ ಬಳಿ ಬಿದ್ದಿದ್ದ ಕಾಯಿ ಹೆಕ್ಕುವಾಗ ಅವರು ಕಾಲು ಜಾರಿ ನೀರಿಗೆ ಬಿದ್ದರು.
ಮಧ್ಯಾಹ್ನ 2 ಗಂಟೆ ಆದರೂ ಅವರು ಮನೆಗೆ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದರು. ಆಗ ಬಾವಿಯಲ್ಲಿ ಅವರ ಶವ ಕಾಣಿಸಿದೆ. ತಮ್ಮನ ಮಗ ಕೃಷ್ಣ ಗೋಪಾಲ ಭಟ್ಟ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.