ಸಿದ್ದಾಪುರ: ಶಿರಸಿ – ಸಿದ್ದಾಪುರ ರಸ್ತೆಯ ವಿದ್ಯಾಗಿರಿ ಕ್ರಾಸಿನಲ್ಲಿ ಬೈಕಿಗೆ ಬೈಕು ಗುದ್ದಿದ ಪರಿಣಾಮ ರಾಧಾಕೃಷ್ಣ ಎಂಬಾತರು ಸಾವನಪ್ಪಿದ್ದಾರೆ.
ರಾಧಾಕೃಷ್ಣ ಅವರು ಬೈಕಿನಲ್ಲಿ ಚಲಿಸುತ್ತಿದ್ದಾಗ ಹಿಂದಿನಿAದ ಬೈಕ್ ಓಡಿಸಿಕೊಂಡು ಬಂದ ಸಂದೀಪ ಎಂಬಾತರು ಅವರಿಗೆ ಗುದ್ದಿದ್ದಾರೆ. ಇದರಿಂದ ಎರಡು ಬೈಕಿನ ಸವಾರರು ನೆಲಕ್ಕೆ ಬಿದ್ದು ಗಾಯಗೊಂಡರು. ಗಂಭೀರ ಗಾಯಗೊಂಡಿದ್ದ ರಾಧಾಕೃಷ್ಣ ಅವರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕೊನೆ ಉಸಿರೆಳೆದರು.
ರಾಧಾಕೃಷ್ಣ ಅವರು ಬಲಕ್ಕೆ ತಿರುಗುವ ವೇಳೆ ಸಂದೀಪ್ ವೇಗದಿಂದ ಬಂದು ಬೈಕ್ ಗುದ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದರು. ಅಪಘಾತಕ್ಕೆ ಕಾರಣವಾದ ಸಂದೀಪ ವಿರುದ್ಧ ರಾಧಾಕೃಷ್ಣ ಅವರ ಪತ್ನಿ ಲಕ್ಷ್ಮೀ ಪೊಲೀಸ್ ದೂರು ನೀಡಿದ್ದಾರೆ.



