ಕಾರವಾರ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಕಾರವಾರಕ್ಕೆ ಬಂದಿದ್ದರು. ಇಲ್ಲಿನ ಕದಂಬ ನೌಕಾನೆಲೆಗೆ ತೆರಳಿದ ಅವರು ಐಎನ್‌ಎನ್ ವಿಕ್ರಾಂತ ನೌಕೆಯಲ್ಲಿ ಸಮುದ್ರ ಸಂಚಾರ ನಡೆಸಿದರು.
ದ್ರೌಪದಿ ಮುರ್ಮು ಅವರು ಗೋವಾದಿಂದ ಕಾರವಾರ ಪ್ರವೇಶಿಸಿದರು. ಭಾರತದ ನೌಕಾ ಪರಾಕ್ರಮದ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ನೌಕೆಗಳ ಮೇಲೆ ವಿಮಾನ ಹಾರಾಡುವಿಕೆ ಹಾಗೂ ಇಳಿಯುವಿಕೆಯನ್ನು ಅವರು ವೀಕ್ಷಿಸಿದರು.
ಜಲ ಅಂತರ್ಗಾಮಿ ನೌಕೆಗಳನ್ನು ನೋಡಿ, ಅವುಗಳ ಕಾರ್ಯದ ಬಗ್ಗೆ ಪ್ರಶ್ನಿಸಿದರು. ಇದಕ್ಕೂ ಮುನ್ನ ಗೋವಾದ ಐಎನ್‌ಎಸ್ ಹಂಸವನ್ನು ವೀಕ್ಷಿಸಿದರು. 150ಕ್ಕೂ ಅಧಿಕ ನೌಕಾ ಸಿಬ್ಬಂದಿ ಅವರನ್ನು ಬರಮಾಡಿಕೊಂಡರು.



