ಯಲ್ಲಾಪುರ: ಎಪಿಎಂಸಿ ಮುಂದಿನ ಶಕ್ತಿ ಗಣಪತಿ ದೇವಾಲಯದಲ್ಲಿ `ಹವ್ಯಕ ಪ್ರತಿಬಿಂಬ’ ಕಾರ್ಯಕ್ರಮ ನಡೆಯಲಿದ್ದು, ಈ ಬಾರಿ ವಿಶೇಷವಾಗಿ `ತಂಬುಳಿ ಹಬ್ಬ’ವನ್ನು ಆಯೋಜಿಸಲಾಗಿದೆ. ತಂಬಳಿ ಮಾಡುವ ಸ್ಪರ್ಧೆಯಲ್ಲಿ ಭಾಗವಹಿಸುವವರು ಮನೆಯಿಂದ ತಂಬಳಿ ಮಾಡಿಕೊಂಡು ಬರುವುದರ ಜೊತೆ ಅದನ್ನು ಮಾಡುವ ವಿಧಾನದ ಬಗ್ಗೆಯೂ ಬರೆದು ತರಬೇಕು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೂರು ಬಹುಮಾನಗಳಿವೆ!
ನವೆಂಬರ್ 10ರಂದು ಬೆಳಗ್ಗೆ 10ರಿಂದ ಸಂಜೆ 8ರತನಕ `ಹವ್ಯಕ ಪ್ರತಿಬಿಂಬ’ ನಡೆಯಲಿದೆ. 6 ವರ್ಷದ ಒಳಗಿನ ಮಕ್ಕಳಿಗೆ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 7ರಿಂದ 12ವರ್ಷದವರಿಗೆ ಭಗವದ್ಗೀತೆ, ಚಿತ್ರಕಲೆ, ಕೆರೆದಂಡೆ ಆಟದ ಸ್ಪರ್ಧೆಗಳಿವೆ. 18 ವರ್ಷ ಮೇಲ್ಪಟ್ಟವರಿಗೆ ರಂಗೋಲಿ, ಜಾನಪದ ಗೀತೆ ಹಾಗೂ ಹವಿ ರುಚಿ ಸ್ಪರ್ಧೆ ಅಂಗವಾಗಿ ತಂಬುಳಿ ತಯಾರಿಕೆಗೆ ಅವಕಾಶ ನೀಡಲಾಗಿದೆ. `ತಂಬುಳಿಯನ್ನು ಮನೆಯಿಂದ ಮಾಡಿ ತರಬೇಕು. ತಂಬುಳಿ ಮಾಡಲು ಬಳಸಿದ ಸಾಮಗ್ರಿ ಹಾಗೂ ಮಾಡುವ ವಿಧಾನದ ಬಗ್ಗೆ ಬರೆದಿಡಬೇಕು’ ಎಂಬುದು ಸ್ಪರ್ಧೆಯ ಮುಖ್ಯ ನಿಯಮ.
ಈ ಎಲ್ಲಾ ಸ್ಪರ್ಧೆಗಳಿಗೂ ಮೂರು ಬಹುಮಾನಗಳಿವೆ. ಒಬ್ಬರಿಗೆ ಮೂರು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದ್ದು, ವಿಜೇತರಿಗೆ ಬೆಂಗಳೂರಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ಅಖಿಲ ಹವ್ಯಕ ಮಹಾಸಭಾ ಈ ಕಾರ್ಯಕ್ರಮ ಆಯೋಜಿಸಿದ್ದು ಶಕ್ತಿ ಗಣಪತಿ ದೇಗುಲ ಸಮಿತಿ
ಸಹಯೋಗವಿದೆ. ಹವ್ಯಕ ಸಮುದಾಯದವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರು.
ಹೆಸರು ನೊಂದಾಯಿಸಲು ಇಲ್ಲಿ ಫೋನ್ ಮಾಡಿ:
ಉಷಾ ಗಾಂವ್ಕರ: 8762200585
ಶಾಂತಲಾ ಹೆಗಡೆ: 9448818057