ಕುಮಟಾ: ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕಾಗಿ ವಿಧವಾ ವೇತನ ರದ್ಧುಗೊಳಿಸುವಂತೆ ಕೋರಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವ ಲೀಲಾವತಿ ನಾಯ್ಕ ಅವರು ತಮ್ಮ ಅರ್ಜಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರಿದ್ದಾರೆ.
ಶುಕ್ರವಾರ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರಕ್ಕೆ ಆಗಮಿಸಿದ ಲೀಲಾವತಿ ನಾಗಪ್ಪ ನಾಯ್ಕ ಅವರು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ ಬಳಿ ಸಮಸ್ಯೆ ಹೇಳಿಕೊಂಡರು. ದಾಖಲೆಗಳನ್ನು ಪರಿಶೀಲಿಸಿದ ಅವರು ವಾಟ್ಸಪ್ ದೂರು ದಾಖಲಿಸಿದರು. 2024ರ ಮಾರ್ಚ 21ರಂದು ಲೀಲಾವತಿ ನಾಯ್ಕ ಅವರು ತಮಗೆ ಬರುತ್ತಿದ್ದ ವಿಧವಾ ವೇತನ ರದ್ದು ಮಾಡುವಂತೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಹಾಕಿದ್ದರು. ಅಲ್ಲಿ ಸ್ಪಂದನೆ ದೊರೆಯದ ಕಾರಣ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಮಾಡಿದ್ದರು. ಇದೀಗ ಅಲ್ಲಿಯೂ ಕೆಲಸ ಆಗದ ಕಾರಣ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
`ಅರ್ಜಿ ಹಾಕಿದ ದಿನದಿಂದ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದು, ಕೆಲಸ ಮಾತ್ರ ಆಗುತ್ತಿಲ್ಲ. ಗ್ರಾಮ ಲೆಕ್ಕಾಧಿಕಾರಿಯಿಂದ ಹಿಡಿದು ಉಪವಿಭಾಗಾಧಿಕಾರಿ ಕಚೇರಿಯವರೆಗಿನ ಓಡಾಡಿದರೂ ಪ್ರಯೋಜನವಾಗಿಲ್ಲ’ ಎಂದು ಲೀಲಾವತಿ ನಾಯ್ಕ ಹೇಳಿದರು. `ಇಲ್ಲಿಯೂ ನ್ಯಾಯ ಸಿಗದಿದ್ದರೆ ಮುಖ್ಯಮಂತ್ರಿಗಳವರೆಗೂ ದೂರು ನೀಡುವುದು ಅನಿವಾರ್ಯ’ ಎಂದು ಸಮಾಜ ಸೇವಕ ಸುಧಾಕರ ನಾಯ್ಕ ಹೇಳಿದ್ದಾರೆ.
ಲೀಲಾವತಿ ನಾಯ್ಕ ಅವರ ಅಳಲು ಏನು? ವಿಡಿಯೋ ಇಲ್ಲಿ ನೋಡಿ..