ಕಾರವಾರ: ಬಂಗಾರದ ಆಭರಣಗಳನ್ನು ಟ್ರಿಜರಿಯಲ್ಲಿರಿಸಿ ಬೀಗ ಹಾಕಿದ್ದರೂ ಲಾಕರ್ ಚಾವಿಯನ್ನು ಅಲ್ಲಿಯೇ ಬಿಟ್ಟಿದ್ದ ಶಿಕ್ಷಕಿಯೊಬ್ಬರು 5.60 ಲಕ್ಷ ರೂ ಮೌಲ್ಯದ ಚಿನ್ನದ ಆಭರಣಗಳನ್ನು ಕಳೆದುಕೊಂಡಿದ್ದಾರೆ.
ಆಶ್ರಮ ರಸ್ತೆಯ ಅಭಿಮಾನಶ್ರೀ ಅಪಾರ್ಟಮೆಂಟಿನಲ್ಲಿ ವಾಸವಾಗಿರುವ ಪ್ರೀಯಾ ಅಂತೋನಿ ಫರ್ನಾಂಡಿಸ್ (42) ಅವರು ಇದೀಗ ಕಳೆದು ಹೋದ ಚಿನ್ನದ ಹುಡುಕಾಟದಲ್ಲಿದ್ದಾರೆ. ಗುರುವಾರ ಬೆಳಗ್ಗೆ 8.30ಕ್ಕೆ ಅವರು ಮನೆಗೆ ಬೀಗ ಹಾಕಿ ಶಾಲೆಗೆ ಹೋಗಿದ್ದರು. ಶಾಲೆಗೆ ಹೋಗುವ ಮುನ್ನ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಟ್ರಿಜರಿಯಲ್ಲಿರಿಸಿದ್ದರು. ಆದರೆ, ಟ್ರಿಜರಿ ಚಾವಿಯನ್ನು ಮಾತ್ರ ಬೆಡ್ ರೂಂ’ನಲ್ಲಿ ಹಾಗೇ ಬಿಟ್ಟಿದ್ದರು.
ಸಂಜೆ 4.30ಕ್ಕೆ ಅವರು ಶಾಲೆ ಮುಗಿಸಿ ಮನೆಗೆ ಬಂದಾಗ ಬಾಗಿಲು ತೆರೆದಿತ್ತು. ಬಾಗಿಲ ಬೀಗವನ್ನು ಒಡೆದಿರುವುದು ಗಮನಕ್ಕೆ ಬಂದಿತು. ಕೂಡಲೇ ಅವರು ಬೆಡ್ ರೂಂ ಒಳಗೆ ಹೋಗಿ ನೋಡಿದಾಗ ಅಲ್ಲಿದ್ದ ಚಾವಿ ಎಗರಿಸಿದ ಕಳ್ಳರು ಚಿನ್ನಾಭರಣಗಳನ್ನು ಅಪಹರಿಸಿದ್ದರು. ಎಲ್ಲಾ ಕಡೆ ಕಳ್ಳರ ಹುಡುಕಾಟ ನಡೆಸಿದರೂ ಸುಳಿವು ಸಿಗಲಿಲ್ಲ. ಕಳೆದ ಚಿನ್ನವೂ ಪತ್ತೆ ಆಗಲಿಲ್ಲ. ಹೀಗಾಗಿ ಪ್ರೀಯಾ ಫರ್ನಾಂಡಿಸ್ ಇದೀಗ ಪೊಲೀಸ್ ದೂರು ನೀಡಿದ್ದಾರೆ. `ಕಳ್ಳನನ್ನು ಹುಡುಕಿ, ತಮ್ಮ ಚಿನ್ನ ಮರಳಿಸಿ’ ಎಂದು ಅವರು ಕೇಳಿಕೊಂಡಿದ್ದಾರೆ.
#S News Digitel Advertisement: ನಿಮ್ಮ ಮನೆ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸಿ. ಗುಣಮಟ್ಟದ ಸಿಸಿ ಕ್ಯಾಮರಾ ಖರೀದಿಗೆ `ಟೆಕ್ ಬೈಟ್ ಐಟಿ ಸೆಲ್ಯುಷನ್ ಏಜನ್ಸಿ’ಗೆ ಫೋನ್ ಮಾಡಿ: 8431314190 ಅಥವಾ 8050439181




