ಕುಮಟಾ: ದಿವಿಗಿಯಿಂದ ಕುಮಟಾ ಕಡೆ ವೇಗವಾಗಿ ಬಸ್ಸು ಓಡಿಸಿಕೊಂಡು ಬಂದ ಕೆ ರವಿಕುಮಾರ್ ಕಟ್ಟಪ್ಪನ್ ನಿವೃತ್ತ ನೌಕರ ನಾಗು ಮುಕ್ರಿ ಅವರಿಗೆ ಸರ್ಕಾರಿ ವಾಹನ ಗುದ್ದಿದ್ದರಿಂದ ನಾಗು ಮುಕ್ರಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಧಾರೇಶ್ವರದ ಬೆಲೆಮಠದವರಾಗಿದ್ದ ನಾಗು ಬಾಳಾ ಮುಕ್ರಿ (68) ಕುಮಟಾ ಹೆಗಡೆಯ ಗುನಗಕೊಪ್ಪದ ಬಳಿ ವಾಸವಾಗಿದ್ದರು. ನಿವೃತ್ತಿ ನಂತರ ಅವರು ನೆಮ್ಮದಿಯ ಬದುಕು ಸಾಗಿಸುತ್ತಿದ್ದರು. ನ 9ರಂದು ರಾತ್ರಿ 8.15ರ ವೇಳೆಗೆ ಕುಮಟಾ ಮಣಕಿ ಗಾಂಧಿ ನಗರದ ಬಳಿ ಅವರು ನಡೆದು ಹೋಗುತ್ತಿದ್ದರು. ರಾಮಲೀಲ್ಲಾ ಆಸ್ಪತ್ರೆ ಮುಂದೆ ಅವರಿಗೆ ಕೆಎಸ್‌ಆರ್‌ಟಿಸಿ ಬಸ್ಸು ಗುದ್ದಿತು.
ಬಸ್ಸು ಗುದ್ದಿದ ರಭಸಕ್ಕೆ ಅವರು ತಲೆ ಎರಡು ಹೋಳಾಯಿತು. ಕಾಲು ಸಹ ಗಾಯಗೊಂಡಿತು. ಅವರು ಅಲ್ಲಿಯೇ ಕೊನೆ ಉಸಿರೆಳೆದರು. ಶಿವಮೊಗ್ಗದ ಬಸ್ಸು ಚಾಲಕ ಕೆ ರವಿಕುಮಾರ್ ಕಟ್ಟಪ್ಪನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಪಿಎಸ್‌ಐ ರವಿ ಗುಡ್ಡಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.