ಸಿದ್ದಾಪುರ: ನೆಜ್ಜೂರು ಗ್ರಾಮದ ಶ್ಯಾಮಲಾ ಅಶೋಕ ನಾಯರ್ ಅವರ ಮನೆ ಮುಂದೆ ದಾಸ್ತಾನು ಮಾಡಿದ್ದ ಚೀರೆಕಲ್ಲು ರಾಶಿಗೆ ಸಯ್ಯದ್ ಪಿರ್ ರಶೀದ ಸಾಬ್ ಎಂಬಾತ ತನ್ನ ಲಾರಿ ಗುದ್ದಿದ್ದಾನೆ. ಇದರಿಂದ ಲಾರಿ ಜಖಂ ಆಗಿದ್ದು, ಚೀರೆಕಲ್ಲುಗಳು ಸಹ ಛಿದ್ರಗೊಂಡಿದೆ.
ನ 9ರಂದು ನೆಜ್ಜೂರು – ತಾಳಗುಪ್ಪ ರಸ್ತೆ ಮಾರ್ಗವಾಗಿ ಮಹೇಂದ್ರ ಗೂಡ್ಸನ್ನು ಓಡಿಸಿಕೊಂಡು ಬಂದ ಸಯ್ಯದ್ ಪಿರ್ ರಶೀದ ಸಾಬ್ ನೆಜ್ಜುರು ಗ್ರಾಮದಲ್ಲಿ ಈ ಅಪಘಾತ ಮಾಡಿದ್ದಾನೆ. ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣ. ಹೀಗಾಗಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.