ಹಳಿಯಾಳ: ಅಮನಕೊಪ್ಪ ಫೀಶಪ್ಪ ಹನುಮಂತ ನಾಗತ್ರಿ ಕೀಟನಾಶಕ ಸೇವಿಸಿ ಸಾವನಪ್ಪಿದ್ದಾರೆ.
57 ವರ್ಷದ ಅವರು ತಮ್ಮ ಹೊಲದಲ್ಲಿ ಗೋವಿನ ಜೋಳ ಬೆಳೆದಿದ್ದರು. ಸರಾಯಿ ಕುಡಿಯುವ ಚಟವನ್ನು ಸಹ ಅವರು ಹೊಂದಿದ್ದರು. ನ 9ರ ಮಧ್ಯಾಹ್ನ ಹೊಲಕ್ಕೆ ತೆರಳಿ ಕೀಟನಾಶಕ ಸೇವಿಸಿದ್ದರು. ಗೋವಿನ ಜೋಳಕ್ಕೆ ಹೊಡೆಯಲು ತಂದಿದ್ದ ಔಷಧಿ ಅವರ ದೇಹ ಸೇರಿದ್ದರಿಂದ ಅಸ್ವಸ್ಥಗೊಂಡಿದ್ದರು.
ಅವರನ್ನು ಹಳಿಯಾಳ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಕರೆದೊಯ್ಯಲಾಯಿತು. ಭಾನುವಾರ ಸಂಜೆ ಅವರು ಆಸ್ಪತ್ರೆಯಲ್ಲಿಯೇ ಕೊನೆ ಉಸಿರೆಳೆದರು. ಕೀಟನಾಶಕ ಸೇವನೆಗೆ ಕಾರಣ ಗೊತ್ತಾಗಲಿಲ್ಲ.