ಭಟ್ಕಳ: ನಗರದಲ್ಲಿ 9 ಕೆಜಿ ಮಾದಕ ವ್ಯಸನ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಬಳಿಯಿದ್ದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಈ ಮೂವರ ಮೇಲೆಯೂ ಕಠಿಣ ಕ್ರಮ ಜರುಗಿಸುವಂತೆ ಪಿಎಸ್‌ಐ ನವೀನ ನಾಯ್ಕ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಭಾನುವಾರ ಸಂಜೆ ಹೆದ್ದಾರಿ ಅಂಚಿನ ತೆಂಗಿನಗುoಡಿ ಕ್ರಾಸಿನ ಬಳಿ ಬಿಳಿ ಬಣ್ಣದ ಹುಂಡೈ ಕಾರು ನಿಂತಿತ್ತು. ಅದರಲ್ಲಿದ್ದ ಸೆಂಟ್ರಲ್ ಲಾಡ್ಜ್ ಬಳಿಯ ಆಟೋ ಚಾಲಕ ಸಯ್ಯದ್ ಅಕ್ರಮ್, ಗುಳ್ಮೆ ಭಾಗದ ಕೆಲಸಗಾರ ಅಬ್ದುಲ್ ರೆಹಮಾನ್ ಹಾಗೂ ಶಿರಸಿ ಕಸ್ತೂರಿಬಾನಗರದ ಚಾಲಕ ಅಜರುದ್ಧೀನ್ 9.170 ಕೆಜಿ ಗಾಂಜಾ ಹಿಡಿದುಕೊಂಡಿದ್ದರು. ಪೊಲೀಸರು 4.5 ಲಕ್ಷ ರೂ ಮೌಲ್ಯದ ಗಾಂಜಾದ ಜೊತೆ 6 ಲಕ್ಷ ರೂ ಮೌಲ್ಯದ ಕಾರನ್ನು ವಶಕ್ಕೆ ಪಡೆದರು.
ಎಎಸ್‌ಐ ಗೋಪಾಲ ನಾಯಕ, ಪೊಲೀಸ್ ಸಿಬ್ಬಂದಿ ಗಿರೀಶ ಅಂಕೋಲೆಕರ, ಜೈರಾಮ ಹೊಸ್ಕಟ್ಟಾ, ಉದಯ ನಾಯ್ಕ, ದೀಪಕ ಎಸ್ ನಾಯ್ಕ, ಮದಾರಸಾಬ ಚಿಕ್ಕೇರಿ, ಕಾಶಿನಾಥ ಗೊಟಗುಣಸಿ, ಮಹಾಂತೇಶ ಹಿರೇಮಠ, ಕಿರಣ ಪಾಟೀಲ್, ಜಗದೀಶ ನಾಯ್ಕ ಸೇರಿ ಆರೋಪಿಗಳ ಹೆಡೆಮುರಿ ಕಟ್ಟಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.