ಕಾರವಾರ: ಸೆಕ್ಯುರಿಟಿ ಗಾರ್ಡ ಆಗಿ ಕೆಲಸ ಮಾಡುತ್ತಿದ್ದ ಸಂತೋಷ ಗುರವ್ (53) ವಾಯು ವಿಹಾರಕ್ಕೆ ಹೋದಾಗ ಅರಬ್ಬಿ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ.
ಸಿದ್ಧರದ ನರಸಿಂಹ ದೇವಸ್ಥಾನ ಬಳಿಯವರಾದ ಸಂತೋಷ ವಿಠ್ಠಬಾ ಗುರವ್ (53) ಬಾಂಡಿಶೆಟ್ಟಾ ಬಳಿಯ ನಾಗವಾಡದಲ್ಲಿ ವಾಸವಾಗಿದ್ದರು. ಅಲ್ಲಿನ ಶೋಭಾ ಅವರ ಮನೆಯಲ್ಲಿ ಅವರು ಬಾಡಿಗೆಗೆ ಇದ್ದರು. ಆರೋಗ್ಯ ಸಮಸ್ಯೆ ಕಾರಣ ಅವರು ಸೆಕ್ಯುರಿಟಿ ಗಾರ್ಡ ಕೆಲಸಕ್ಕೆ ಹೋಗುತ್ತಿರಲಿಲ್ಲ.
ಕೆಲಸ ಇಲ್ಲದ ಕಾರಣ ಅವರಿಗೆ ಆದಾಯವೂ ಇರಲಿಲ್ಲ. ಹೀಗಾಗಿ `ಜೀವನ ನಿರ್ವಹಣೆ ಕಷ್ಟ’ ಎಂದು ಹೇಳುತ್ತಿದ್ದರು. ಇದೇ ಚಿಂತೆಯಲ್ಲಿ ಅವರು ಮದ್ಯ ಸೇವನೆ ಶುರು ಮಾಡಿದ್ದರು.
ನ 10ರಂದು ಅವರು ಸಮುದ್ರ ತೀರಕ್ಕೆ ತೆರಳಿದವರು ಮನೆಗೆ ಮರಳಿಲ್ಲ. ಕಾಲು ಜಾರಿ ಸಮುದ್ರಕ್ಕೆ ಬಿದ್ದು ಸಾವನಪ್ಪಿರುವ ಅನುಮಾನಗಳಿದ್ದು, ಸಂತೋಷ ಗುರವ್ ಅವರ ಪತ್ನಿ ರೇಖಾ ಗುರವ್ ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.