ಬೆಂಗಳೂರು: ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಉಗ್ರರು ಪ್ರತಿ ಜಿಲ್ಲೆಯಲ್ಲಿಯೂ ತಮ್ಮ ಪ್ರತಿನಿಧಿಗಳನ್ನು ನೇಮಿಸಲು ಸಿದ್ಧತೆ ಮಾಡಿಕೊಂಡಿದ್ದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಭಾರತೀಯ ಸೈನಿಕರು, ಪೊಲೀಸರು, ನಿರ್ದಿಷ್ಟ ಧಾರ್ಮಿಕ ಮುಖಂಡರ ಮೇಲೆ ದಾಳಿ ನಡೆಸಲು ಉಗ್ರರು ಚಿಂತನೆ ನಡೆಸಿದ್ದರು. ಇದಕ್ಕಾಗಿ ದೇಶದ ಪ್ರತಿ ಜಿಲ್ಲೆಯಲ್ಲೂ ಯುವಕರನ್ನು ಐಸಿಎಸ್ ಉಗ್ರ ಸಂಘಟನೆಗೆ ನೇಮಿಸುವ ಉದ್ದೇಶ ಹೊಂದಿದ್ದರು. ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 50 ಯುವಕರನ್ನು ಸ್ಲೀಪರ್‌ಸೆಲ್‌ಗಳನ್ನಾಗಿ ನೇಮಕ ಮಾಡಿಕೊಂಡು, 2025ರ ವೇಳೆ ದೇಶಾದ್ಯಂತ ಐಸಿಸ್ ಉಗ್ರ ಸಂಘಟನೆಯ ಜಾಲವನ್ನು ವಿಸ್ತರಣೆ ಮಾಡಬೇಕು ಎಂಬುದು ಅವರ ಉದ್ದೇಶವಾಗಿತ್ತು ಎಂಬ ವಿಷಯ ಹೊರಬಿದ್ದಿದೆ.
ದೇಶದಲ್ಲಿ ಇಸಿಸ್ ಕಾರ್ಯಚಟುವಟಿಕೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಬಳ್ಳಾರಿ ಮಾಡ್ಯೂಲ್ ಪ್ರಕರಣದ 7 ಮಂದಿ ಶಂಕಿತರ ವಿರುದ್ಧ ಎನ್‌ಐಎ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ. ಈ ದೋಷಾರೋಪಣಪಟ್ಟಿಯಲ್ಲಿ ಉಗ್ರರು ಪ್ರತಿ ಜಿಲ್ಲೆಯಲ್ಲಿಯೂ ಪ್ರತಿನಿಧಿ ನೇಮಿಸುವ ತಯಾರಿ ನಡೆಸಿದ ಬಗ್ಗೆ ಉಲ್ಲೇಖವಿದೆ. ಸದ್ಯ ಸುಲೈಮಾನ್ ಅಲಿಯಾಸ್ ಮಿನಾಜ್, ಮೊಹಮ್ಮದ್ ಮುನಿರುದ್ದೀನ್, ಸೈಯದ್ ಸಮೀರ್ ಎಂ.ಡಿ.ಮಜಾಮಿಲ್, ಮಹಾರಾಷ್ಟ್ರದ ಅನಾಸ್ ಇಕ್ಬಾಲ್ ಶೇಖ್ ಮೊಹಮ್ಮದ್, ಜಾರ್ಖಂಡ್‌ನ ಶಹಬಾಜ್ ಅಲಿಯಾಸ್ ಜುಲ್ಫಿಕರ್ ಹಾಗೂ ದೆಹಲಿಯ ಶಯಾನ್ ರೆಹಮಾನ್ ಅಲಿಯಾಸ್ ಹುಸೇನ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ.
Discussion about this post