ಹೊನ್ನಾವರ: ಕಾಸರಕೋಡ ಟೊಂಕ ಪ್ರದೇಶದಲ್ಲಿ ಈವರೆಗೆ 112,063ಕ್ಕೂ ಹೆಚ್ಚು ಕಡಲ ಆಮೆ ಮೊಟ್ಟೆ ಹಾಗೂ 54,850 ಆಮೆ ಮರಿಗಳ ದಾಖಲಾತಿ ನಡೆದಿದೆ. ಅದಾಗಿಯೂ ಸಮುದ್ರ ಆಮೆ ಪುನರ್ವಸತಿ ಕೇಂದ್ರಕ್ಕೆ ಈ ಪ್ರದೇಶ ಆಯ್ಕೆಯಾಗಿಲ್ಲ. ಈ ಹಿನ್ನಲೆ ಕಡಲ ಆಮೆ ರಕ್ಷಣೆಯಲ್ಲಿ ತೊಡಗಿರುವ ಹೊನ್ನಾವರ ಪೌಂಡೇಶನ್ ಆತಂಕ ವ್ಯಕ್ತಪಡಿಸಿದೆ.
ಹಲವು ವರ್ಷಗಳಿಂದ ಸಮುದ್ರ ಆಮೆಗಳ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹೊನ್ನಾವರ ಫೌಂಡೇಶನ್, ಕರಾವಳಿಯಲ್ಲಿ ಓಲಿವ್ ರಿಡ್ಲಿ ಸಮುದ್ರ ಆಮೆಗಳ ಸಂರಕ್ಷಣೆಯಲ್ಲಿ ಹೊನ್ನಾವರದ ಮಹತ್ವವನ್ನು ತೋರಿಸಲು ಮಾಹಿತಿ ಸಂಗ್ರಹಿಸಿದೆ. ಕರ್ನಾಟಕದ ಕರಾವಳಿಯಲ್ಲಿನ ಓಲಿವ್ ರಿಡ್ಲಿ ಗೂಡುಗಳು ಮತ್ತು ಹೆಚ್‌ಲಿಂಗ್‌ಗಳ ದಾಖಲೆಗಳಲ್ಲಿ ಹೊನ್ನಾವರದಲ್ಲಿ ಹೊಂದಿದೆ. ಅದಾಗಿಯೂ ಈ ಭಾಗದ ಹೊನ್ನಾವರದ ಬದಲಿಗೆ ಕಾರವಾರದಲ್ಲಿ ಕೇಂದ್ರವನ್ನು ಸ್ಥಾಪಿಸುವ ನಿರ್ಣಯ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.