ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ 33 ವರ್ಷಗಳಿಂದ ಹೋರಾಡುತ್ತಿದೆ. ಈ ಹೋರಾಟದಲ್ಲಿ ಮಹಿಳೆಯರ ಕೊಡುಗೆ ಅಪಾರ. ಈ ಹಿನ್ನಲೆಯಲ್ಲಿ ಸಾಕಷ್ಟು ಸಂಖ್ಯೆಯ ಮಹಿಳೆಯರು ಸಹ ನ 21ರಂದು ಬೆಂಗಳೂರಿಗೆ ತೆರಳಿ ತಮ್ಮ ಹಕ್ಕಿಗಾಗಿ ಪ್ರತಿಭಟಿಸಲಿದ್ದಾರೆ.
`ಭೂರಹಿತ ಅರಣ್ಯವಾಸಿಗಳ ಹೋರಾಟಕ್ಕೆ ಮಹಿಳೆಯರ ಭಾಗವಹಿಸುವಿಕೆ ಶಕ್ತಿ ನೀಡಿದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಕಾನೂನು ಅಂಶಗಳ ಬಗ್ಗೆಯೂ ಅರಿತಿರುವ ಮಹಿಳೆಯರು ಅರಣ್ಯ ಸಿಬ್ಬಂದಿ ದೌರ್ಜನ್ಯದ ವಿರುದ್ಧವೂ ಗಟ್ಟಿ ಧ್ವನಿಯಾಗಿದ್ದಾರೆ’ ಎಂದು ಹೋರಾಟಗಾರ ರವೀಂದ್ರ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.
`ಲಕ್ಷವೃಕ್ಷ ಮತ್ತು ದಶಲಕ್ಷ ಅರಣ್ಯವಾಸಿಗಳಿಂದ ದಶಲಕ್ಷ ಗಿಡ ನೇಡುವ ಅಭಿಯಾನದಲ್ಲಿ ಸಹ ಸಾವಿರಾರು ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದರು’ ಎಂದವರು ಸ್ಮರಿಸಿದರು.