ಅಂಕೋಲಾ: ಹಾರವಾಡದ ರೈಲ್ವೆ ನಿಲ್ದಾಣ ಬಳಿಯಿರುವ ಆಶಿತ್ರೇಯಾ ಬಿಲ್ಡಿಂಗ್ ಎದುರು ನಿಲ್ಲಿಸಿದ ಬೈಕ್ ಕಳ್ಳತನವಾಗಿದೆ.
ಸೂಪಾದ ಮಂಜುನಾಥ ಮಹಾದೇವ ವೆಳಿಪ್ ಬೈಕ್ ಕಳೆದುಕೊಂಡಿದ್ದಾರೆ. ಹಾರವಾಡದ ಆಶಿತ್ರೇಯಾ ಬಿಲ್ಡಿಂಗ್’ನಲ್ಲಿ ವಾಸವಾಗಿದ್ದ ಅವರು ಬಿಲ್ಡಿಂಗ್ ಎದುರು ನ 13ರಂದು ಬೈಕ್ ನಿಲ್ಲಿಸಿದ್ದರು. ರಾತ್ರಿ 12 ಗಂಟೆಯವರೆಗೂ ಬೈಕ್ ಅಲ್ಲಿತ್ತು. ಮರುದಿನ ಬೆಳಗ್ಗೆ 6 ಗಂಟೆಗೆ ನೋಡಿದಾಗ ಬೈಕ್ ಕಾಣಲಿಲ್ಲ.
ಅರ್ಗಾದಲ್ಲಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಮಂಜುನಾಥ ಅವರು ನಿತ್ಯ ಬೈಕಿನಲ್ಲಿ ಓಡಾಟ ನಡೆಸುತ್ತಿದ್ದರು. `ತನ್ನ ಸ್ಪಾಂಡ್ಲರ್ ಬೈಕ್ ಹುಡುಕಿಕೊಡಿ’ ಎಂದು ಅವರು ಇದೀಗ ಪೊಲೀಸ್ ದೂರು ನೀಡಿದ್ದಾರೆ.



