ಶಿರಸಿ: ಲಯನ್ಸ ನಗರದಲ್ಲಿನ ಬಾವಿಗೆ ಮಂಗಳವಾರ ರಾತ್ರಿ ಮಹಿಳೆಯೊಬ್ಬರು ಬಿದ್ದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಅವರನ್ನು ಮೇಲೆತ್ತುವ ಪ್ರಯತ್ನ ನಡೆಸಿದ್ದಾರೆ.
ಜಯಾ ಹುನಗುಂದ ಬಾವಿಗೆ ಬಿದ್ದವರು. ಆಕಸ್ಮಿಕವಾಗಿ ಅವರು ಬಾವಿಗೆ ಬಿದ್ದರಾ? ಅಥವಾ ಆತ್ಮಹತ್ಯೆಯ ಪ್ರಯತ್ನ ನಡೆಸಿದ್ದರ? ಎಂದು ಗೊತ್ತಾಗಿಲ್ಲ. ಬಾವಿಯಲ್ಲಿನ ಸದ್ದು ಕೇಳಿದ ಜನ ಅಲ್ಲಿ ಹೋಗಿ ಬೆಳಕು ಬಿಟ್ಟಾಗ ಜಯಾ ಅವರು ಕಾಣಿಸಿದ್ದಾರೆ.
ಅವರನ್ನು ರಕ್ಷಿಸುವುದಕ್ಕಾಗಿ ಸ್ಥಳೀಯರು ಅಗ್ನಿ ಶಾಮಕದಳಕ್ಕೆ ಫೋನ್ ಮಾಡಿದರು. ತಕ್ಷಣ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಮಹಿಳೆಯನ್ನು ಮೇಲೆತ್ತುವ ಪ್ರಯತ್ನ ನಡೆಸಿದ್ದಾರೆ. ಕತ್ತಲೆ ಆವರಿಸಿರುವುದರಿಂದ ಕಾರ್ಯಾಚರಣೆಗೆ ತೊಡಕಾಗುತ್ತಿದೆ.
ಇದೀಗ ಬಂದ ಸುದ್ದಿ:
ರಾತ್ರಿ 10.40ರ ವೇಳೆಗೆ ಮಹಿಳೆಯ ಶವವನ್ನು ಅಗ್ನಿ ಶಾಮಕ ಸಿಬ್ಬಂದಿ ಮೇಲೆತ್ತಿದರು. ಜಯಾ ಅವರು ಬದುಕಿರಬಹುದು ಎಂಬ ಆಶಾ ಭಾವನೆ ಹುಸಿಯಾಗಿದೆ.