ಕುಮಟಾ: ಜೀಪು ಹತ್ತಲು ತಯಾರಾಗಿದ್ದ ಕಾರ್ಮಿಕನಿಗೆ ಕಾರು ಗುದ್ದಿದ ಪರಿಣಾಮ ಸಾಗರ ರಾತೋಡ್ ಎಂಬ ಕೂಲಿಯಾಳು 20 ಅಡಿ ಹಾರಿ ಬಿದ್ದು ಗಾಯಗೊಂಡಿದ್ದಾರೆ.
ನ 20ರಂದು ಹಿರೇಗುತ್ತಿ ಗ್ರಾಮದ ಮಕರ ಹೊಟೇಲ್ ಹತ್ತಿರ ಬಳಿ ಈ ಅಪಘಾತ ನಡೆದಿದೆ. ತೀರ್ಥಹಳ್ಳಿಯ ಪ್ರದೀನ್ ಎಂಬಾತರು ಅಂಕೋಲಾ-ಕುಮಟಾ ಕಡೆ ವೇಗವಾಗಿ ಕಾರು ಓಡಿಸಿಕೊಂಡು ಬಂದಿದ್ದು, ಯಾದಗಿರಿಯ ಸಾಗರ ರಾಥೋಡ್’ಗೆ ಡಿಕ್ಕಿ ಹೊಡೆದಿದ್ದಾರೆ.
ಅಪಘಾತದ ರಭಸಕ್ಕೆ 20 ಅಡಿ ದೂರ ಹಾರಿಬಿದ್ದ ಸಾಗರ್ ತಲೆ, ಮೈ-ಕೈ’ಗೆ ಪೆಟ್ಟು ಮಾಡಿಕೊಂಡಿದ್ದಾರೆ. ಚರ್ಮ ಸುಲಿಯುವಂತೆ ಗಾಯವಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.