ಕುಮಟಾ: ನಿವೃತ್ತ ಉಪನ್ಯಾಸಕ ಪ್ರಕಾಶ ನಾಯಕ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ನಾಯಕ ನಡೆದು ಹೋಗುತ್ತಿದ್ದಾಗ ಮನೀಷ ನಾಯಕ ಎಂಬಾತ ಬೈಕ್ ಗುದ್ದಿದ್ದು, ವಿಜಯಲಕ್ಷ್ಮಿ ನಾಯಕ ಅವರು ಗಾಯಗೊಂಡಿದ್ದಾರೆ.
ಕಾರವಾರದ ಕೆಎಚ್‌ಬಿ ಕಾಲೋನಿಯ ಪ್ರಕಾಶ ನಾಯಕ ನ 14ರಂದು ತಮ್ಮ ಪತ್ನಿ ಜೊತೆ ಕುಮಟಾ-ಅಂಕೋಲಾ ಮಾರ್ಗವಾಗಿ ನಡೆದು ಹೋಗುತ್ತಿದ್ದರು. ಆಗ ಜೋರಾಗಿ ಬೈಕ್ ಓಡಿಸಿಕೊಂಡು ಬಂದ ವಾಸರ ಕುದ್ರುಗೆಯ ಮನೀಷ ನಾಯಕ ವಿಜಯಲಕ್ಷ್ಮಿ ಅವರಿಗೆ ಹಿಂದಿನಿoದ ಗುದ್ದಿದರು. ಕುಮಟಾದ ರಾಮಲೀಲಾ ಆಸ್ಪತ್ರೆ ಹತ್ತಿರ ನಡೆದ ಈ ಅಪಘಾತದಲ್ಲಿ ವಿಜಯಲಕ್ಷ್ಮಿ ಅವರ ಕೈ ಮುರಿದಿದೆ. ಸೊಂಟ, ಮೈ-ಕೈ’ಗೆ ಗಾಯವಾಗಿದೆ.
ಪ್ರಕಾಶ ನಾಯಕ ಅವರು ಗಾಯಗೊಂಡ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಪ್ರಕಾಶ ನಾಯಕ ಅವರು ಪೊಲೀಸ್ ಠಾಣೆಗೆ ಹಾಜರಾಗಿ ಬೈಕ್ ಚಾಲಕನ ವಿರುದ್ಧ ದೂರು ನೀಡಿದ್ದಾರೆ.