ಮುಂಡಗೋಡ : ಹುಲಿಹೊಂಡದಲ್ಲಿ ಬೆಳೆದಿದ್ದ 5 ಎಕರೆ ಕಬ್ಬು ಅಗ್ನಿಗೆ ಆಹುತಿಯಾಗಿದೆ.
ಶನಿವಾರ ಮಧ್ಯಾಹ್ನ ವಿದ್ಯುತ್ ಶಾರ್ಟ ಸರ್ಕೀಟ್ ಪರಿಣಾಮ ಕಬ್ಬಿನ ಗದ್ದೆ ಹೊತ್ತಿ ಉರಿಯಿತು. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸಿದರು. ಅದಾಗಿಯೂ ಅಪಾರ ಪ್ರಮಾಣದ ಕಬ್ಬು ಕರಕಲಾಗಿದೆ.
ಶಂಕ್ರಯ್ಯ ಮುಳುಗುಂದಮಠ ಅವರು ಅತ್ಯಂತ ಶೃದ್ಧೆಯಿಂದ ಕಬ್ಬು ಬೆಳೆದಿದ್ದರು. ಅವರ ಬೆಳೆ ನಾಶವಾಗಿದೆ. ಪಕ್ಕದ ಹೊಲಕ್ಕೆ ಬೆಂಕಿ ಹರಡದಂತೆ ಅಗ್ನಿಶಾಮಕ ಠಾಣೆಯ ಮಲ್ಲಿಕಾರ್ಜುನ ಮಲ್ಲಿಗೆವಾಡ ತಡೆದರು.
ಅಗ್ನಿಶಾಮಕ ಸಿಬ್ಬಂದಿ ವೆಂಕಟೇಶ್ ಪಿ, ಮಹಾಬಲೇಶ್ವರ ಶಿವನಗುಡಿ, ಹರೀಶ್ ಪಟಗಾರ್, ದುರ್ಗಪ್ಪ ಹರಿಜನ, ರಾಹುಲ್ ಜಿಡ್ಡಿಮನಿ ಈ ಕಾರ್ಯಚರಣೆಯಲ್ಲಿದ್ದರು.




