ಯಲ್ಲಾಪುರ: ನಾಯ್ಕನಕೆರೆ ಬಳಿ ಭಾನುವಾರ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನಪ್ಪಿದ್ದಾರೆ.
ಯಲ್ಲಾಪುರ ಪೇಟೆಗೆ ಬಂದಿದ್ದ ಮಾವಿನಮನೆಯ ರವಿ ಗೌಡ (38) ಹಾಗೂ ಶಾರದಾ ಗೌಡ (32) ಮನೆಗೆ ಮರಳುತ್ತಿದ್ದರು. ಈ ಇಬ್ಬರು ಬೈಕಿನಲ್ಲಿ ಹೋಗುತ್ತಿರುವಾಗ ಹಿಂದಿನಿoದ ಬಂದ ಲಾರಿ ಬೈಕಿಗೆ ಗುದ್ದಿತು. ಪರಿಣಾಮ ಬೈಕ್ ಓಡಿಸುತ್ತಿದ್ದ ರವಿ ಗೌಡ ಮುಂದೆ ಹಾರಿ ಬಿದ್ದರು. ಬೈಕ್ ಜೊತೆ ನೆಲಕ್ಕೆ ಬಿದ್ದ ಶಾರದಾ ಗೌಡ ಅವರ ಮೇಲೆ ಲಾರಿ ಹಾಯ್ದು ಅವರು ಅಲ್ಲಿಯೇ ಸಾವನಪ್ಪಿದರು.
ಭಾನುವಾರ ಸಂತೆಗಾಗಿ ಈ ಇಬ್ಬರು ಯಲ್ಲಾಪುರ ಪೇಟೆಗೆ ಬಂದಿದ್ದರು. ಸಂಜೆ ಸಂತೆ ಮುಗಿಸಿ ಮನೆಗೆ ಮರಳುತ್ತಿದ್ದರು. ಆಗ ಈ ಅವಘಡ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ರವಿ ಗೌಡ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವನಪ್ಪಿದ ಶಾರದಾ ಗೌಡ ಅವರ ಶವವನ್ನು ಶವಾಗಾರದಲ್ಲಿರಿಸಲಾಗಿದೆ. ಅಪಘಾತದಿಂದಾಗಿ ನಾಯ್ಕನಕೆರೆ ಬಳಿ ಟ್ರಾಫಿಕ್ ಜಾಮ್ ಆಗಿದ್ದು, ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.