ಯಲ್ಲಾಪುರ: ಸವಣಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕನ್ನಡದ ಕಹಳೆ ಮೊಳಗಿದ್ದು, ಗೀತ ಗಾಯನ, ಕನ್ನಡ ಕಾರ್ತಿಕ ರಾಜ್ಯೋತ್ಸವದ ಸಡಗರಲ್ಲಿ ಮಕ್ಕಳು ಉತ್ಸಾಹ ತೋರಿದರು.
ಸಾಹಿತಿ ಕೆ ವಿ ಕೋಮಾರ್ ಮಕ್ಕಳ ಜೊತೆ ಬೆರೆತು ತಮ್ಮ ಜೀವನ ಅನುಭವಗಳನ್ನು ಹಂಚಿಕೊAಡರು. ಅಲ್ಲಿದ್ದ ಮಕ್ಕಳು ಸಹ ಕವನಗಳನ್ನು ವಾಚಿಸಿ, ಗಾಯನ ಪ್ರಸ್ತುತಪಡಿಸಿದರು. ಶಾಲೆಯ ಮಕ್ಕಳು ಕನ್ನಡ ಗೀತೆಗಳನ್ನು ಹಾಡುವ ಮೂಲಕ ಭಾಷಾ ಪ್ರೇಮ ಪ್ರದರ್ಶಿಸಿದರು.
ಹಲವು ಅಧ್ಯಕ್ಷರ ಸಮಾಗಮ
ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಎಸ್ ಡಿ ಎಂ ಸಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ, ಹಾಲು ಒಕ್ಕೂಟದ ಅಧ್ಯಕ್ಷ ಶ್ರೀಪಾದ ಪಣತಗೇರಿ ಮುಖ್ಯ ಭಾಷಣ ಮಾಡಿದರು. ಗ್ರಾ ಪಂ ಸದಸ್ಯ ಸುಬ್ಬಣ್ಣ ಉದ್ದಾಬೈಲ್, ಟಿಎಸ್‌ಎಸ್ ಸದಸ್ಯ ಕೃಷ್ಣ ಹೆಗಡೆ ಸಹ ಮಕ್ಕಳ ಜೊತೆ ಮಾತನಾಡಿದರು.
ಪ್ರಾರ್ಥನೆ ಹಾಗೂ ಸ್ವಾಗತ ಗೀತೆ ಹಾಡಿದ ಮಕ್ಕಳು ಗಣ್ಯರ ಮನಗೆದ್ದರು. ಊರಿನವರಾದ ಸುಜಾತಾ ಹಾಗೂ ಆರ್ ಜಿ ಭಟ್ಟ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕಿ ಗೀತಾ ಜಿ ನಾಯಕ ಅತಿಥಿಗಳನ್ನು ಸ್ವಾಗತಿಸಿದ್ದು, ಮಕ್ಕಳು ಪುಷ್ಪ ವಿತರಿಸಿದರು. ಶಿಕ್ಷಕಿ ಪವಿತ್ರಾ ಆಚಾರಿ ಹಾಗೂ ಗೀತಾ ಪಟಗಾರ ನಿರ್ವಹಿಸಿದರು. ಶಿಕ್ಷಕಿ ಪೂರ್ಣಿಮಾ ನಾಯ್ಕ ವಂದಿಸಿದರು.