ಕಾರವಾರ: ನಗೆ ಶಾಲಾ ಮಕ್ಕಳಿಗೆ ಭಾರತ ಸಂವಿಧಾನದ ಬಗ್ಗೆ ಶಿಕ್ಷಕರು ಬೋಧಿಸಿ, ಸಂವಿಧಾನ ಪೀಠಿಕೆಯನ್ನು ಪ್ರಮಾಣ ವಚನ ರೂಪದಲ್ಲಿ ಬೋಧಿಸಿದರು.
ಮಂಗಳವಾರ ಇಲ್ಲಿನ ಮಕ್ಕಳಿಗೆ ಕಾನೂನು ಅರಿವು ಹಾಗೂ ವಿವಿಧ ಹಕ್ಕು-ಕರ್ತವ್ಯಗಳ ಬಗ್ಗೆ ಶಿಕ್ಷಕರು ಅರಿವು ಮೂಡಿಸಿದರು. ಜೊತೆಗೆ ನ 26ರ ಸಂವಿಧಾನ ದಿನ ನೆನಪಿಸುವ ಹಿನ್ನಲೆ ಭಾಷಣಗಳನ್ನು ಮಾಡಿಸಿದರು.
ಮುಖ್ಯಾಧ್ಯಾಪಕ ಅಖ್ತರ ಸೈಯದ್ ಅವರು ಶಾಲಾ ಮಕ್ಕಳಿಗೆ ಸಂವಿಧಾನ ಪೀಠಿಕೆಯ ಅಂಶಗಳನ್ನು ವಿವರಿಸಿದರು. ಸಹ ಶಿಕ್ಷಕಿ ರೂಪಾ ಉಮೇಶ ನಾಯ್ಕ `ಭಾರತ ಸಂವಿಧಾನ ನಮಗೆ ರಕ್ಷಣೆಯ ಹಕ್ಕು ನೀಡಿದೆ’ ಎಂದು ತಿಳಿಸಿದರು. ಸಹ ಶಿಕ್ಷಕಿ ರೇಷ್ಮಾ ಹುಲಸ್ವಾರ, ಕೈಗಾ ಅತಿಥಿ ಶಿಕ್ಷಕಿ ಪ್ರಿಯಾ ಲಾಂಜೇಕರ, ಶಾಲಾ ಮುಖ್ಯಮಂತ್ರಿ ಭಾಗ್ಯಶ್ರೀ ಗೌಡ ಹಾಜರಿದ್ದರು. ಕಾರ್ಯಕ್ರಮದ ಕೊನೆಗೆ ಸಿಹಿ ವಿತರಿಸಲಾಯಿತು.