ಭಟ್ಕಳ: ತೆಂಗಿನಗುoಡಿಯಲ್ಲಿರುವ 50 ವರ್ಷ ಹಳೆಯ ಬಂಗಲೆ ಮೇಲೆ ಐವರು ಕಣ್ಣು ಹಾಕಿದ್ದು, ಆ ಬಂಗಲೆ ಮಾಲಕ ಕಾಸೀಂ ಅಲಿ ಬುಡ್ಡು (72) ಅವರಿಗೆ ಪದೇ ಪದೇ ಬೆದರಿಕೆ ಬರುತ್ತಿದೆ.
ಕಾಸೀಂ ಅಲಿ ಬುಡ್ಡು ಅವರು ಆ ಬಂಗಲೆಯ ಮಾಲಕರಾಗಿದ್ದು, ಬಂಗಲೆ ಬಿಟ್ಟು ತೆರಳುವಂತೆ ಐವರು ಹಿಂಸೆ ನೀಡುತ್ತಿದ್ದಾರೆ. ಕೆಲ ವರ್ಷಗಳಿಂದ ನಿರಂತರ ಹಿಂಸೆ, ಬೆದರಿಕೆ ಒಡ್ಡುತ್ತಿರುವ ಬಗ್ಗೆ ಕಾಸೀಂ ದೂರಿದ್ದಾರೆ.
ಭಟ್ಕಳ ಕಿದ್ವಾಯಿ ರಸ್ತೆಯ ಮಹಮದ್ ಅಬ್ದುಲ್ ಮುಝಾಪರ್ ಕೋಲಾ, ಜಾಲಿ ರಸ್ತೆಯ ಮಹಮದ್ ಅಬ್ಬುಬಕ್ಕರ್ ಮುಝಾಪರ್ ಕೋಲಾ, ಮಹಮದ್ ಉಜೇರ್ ಮುಝಾಪರ್ ಕೋಲಾ ಹಾಗೂ ಶವೂರು ಕೋಲಾ ವಿರುದ್ಧ ಕಾಸೀಂ ಅಲಿ ಬುಡ್ಡು ಆರೋಪಿಸಿದ್ದಾರೆ.
ಸೆ 17ರಂದು ಕಾಸೀಂ ಅವರ ತಮ್ಮ ಅಬ್ದುಲ್ ಖಾದರ್ ಹಾಗೂ ಅವರ ಪತ್ನಿ ಬೇಬಿ ಸಾರಾ ತೆಂಗಿನಗುoಡಿಗೆ ಹೋದಾಗ ಸಹ ಈ ಐವರು ಆರೋಪಿತರು ಜಮೀನಿಗೆ ಅಕ್ರಮ ಪ್ರವೇಶ ಮಾಡಿದ್ದರು. ಅವರಿಗೂ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಕಾಸೀಂ ಪೊಲೀಸ್ ದೂರು ನೀಡಿದ್ದಾರೆ.