ಮುಂಡಗೋಡ: ಹುಬ್ಬಳ್ಳಿಯಿಂದ ಮುಂಡಗೋಡು ಕಡೆ ಚಲಿಸುತ್ತಿದ್ದ ಕಾರು ಬಾಚಣಗಿ ಬಳಿ ಮರಕ್ಕೆ ಡಿಕ್ಕಿಯಾಗಿದೆ.
ನ 25ರಂದು ಹಳೆ ಹುಬ್ಬಳ್ಳಿಯ ಚಾಲಕ ಮಹ್ಮದ್ ಅಲಿ ಅಲ್ಲಾಭಕ್ಷ ತಾರಿಹಳ್ಳ ಈ ಕಾರು ಓಡಿಸುತ್ತಿದ್ದರು. ಆ ಕಾರಿನಲ್ಲಿ ಹುಬ್ಬಳ್ಳಿಯ ಅಬುಲ್ ಅಜೀಂ ಮುಚ್ಚಾಲೆ ಸಹ ಕೂತಿದ್ದರು. ಕಾರು ಮರಕ್ಕೆ ಗುದ್ದಿದ ಪರಿಣಾಮ ಅಬುಲ್ ಅಜೀಂ ಮುಚ್ಚಾಲೆ ಅವರ ತಲೆಗೆ ಭಾರೀ ಪ್ರಮಾಣದ ಪೆಟ್ಟಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರು ಅಪಘಾತದ ಬಗ್ಗೆ ಅರಿತ ಹುಬ್ಬಳ್ಳಿ ಟಿಪ್ಪುನಗರದ ಮಹಬೂಬಸಾ ಮಚ್ಚಾಲೆ ಅಬುಲ್ ಅಜೀಲ್ ಮುಚ್ಚಾಲೆ ಅವರ ಮನೆಯವರ ಜೊತೆ ಚರ್ಚಿಸಿ, ಮುಂಡಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂಚಾರಿ ನಿಯಮ ಪಾಲಿಸಿ: ಸುರಕ್ಷತಾ ಕ್ರಮ ಅನುಸರಿಸಿ