ಭಟ್ಕಳ: ಬಿಪಿ, ಶುಗರ್ ಹೆಚ್ಚಳದಿಂದ ಬಳಲುತ್ತಿದ್ದ ಶ್ರೀಧರ ನಾಯ್ಕ ಕ್ರಿಮಿನಾಶಕ ಸೇವಿಸಿ ಸಾವನಪ್ಪಿದ್ದಾರೆ.
ಭಟ್ಕಳ ಬೆಳಕೆ ಕಂಚಿಕೇರಿಯ ಶ್ರೀಧರ ಮಾಸ್ತಯ್ಯ ನಾಯ್ಕ (53) ಅವರಿಗೆ ಬಿಪಿ ಹಾಗೂ ಶುಗರ್ ಅಂಶ ಹೆಚ್ಚಳವಾಗಿತ್ತು. ಇದರಿಂದ ಮಾನಸಿಕವಾಗಿ ಅವರು ಕುಗ್ಗಿದ್ದರು.
ನ 22ರಂದು ಮಲ್ಲಿಗೆ ಗಿಡಕ್ಕೆ ಹೊಡೆಯುವ ಕ್ರಿಮಿನಾಶಕ ಸೇವಿಸಿದ ಅವರನ್ನು ಭಟ್ಕಳ ಆಸ್ಪತ್ರೆಗೆ ದಾಖಲಿಸಲಾಯಿತು. ಅದಾದ ನಂತರ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ನ 28ರಂದು ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದರು.




