ಯಲ್ಲಾಪುರ: ಸವಣಗೇರಿಯ ಸೌಮ್ಯಾ ಕರಾಡೆಕರ್ ಅವರ ಸ್ಕೂಟಿ ಕಳ್ಳತನವಾಗಿದೆ.
ಕಾಲೇಜು ವಿದ್ಯಾರ್ಥಿನಿಯಾಗಿರುವ ಸೌಮ್ಯ ಶಂಕರ್ ಕರಾಡೆಕರ್ (25) ಅವರು ಇಸ್ಲಾಂ ಗಲ್ಲಿಯಲ್ಲಿ ವಾಸವಾಗಿದ್ದಾರೆ. ನ 26ರ ರಾತ್ರಿ 10 ಗಂಟೆಗೆ ಅವರ ಮನೆ ಮುಂದೆ ಸ್ಕೂಟಿ ನಿಲ್ಲಿಸಿದ್ದರು.
ಬೆಳಗ್ಗೆ ನೋಡಿದಾಗ ಅಲ್ಲಿ ಸ್ಕೂಟಿ ಇರಲಿಲ್ಲ. ಅಕ್ಕ-ಪಕ್ಕದಲ್ಲಿ ಹುಡುಕಿದರೂ ಸ್ಕೂಟಿ ಕಾಣಲಿಲ್ಲ. 60 ಸಾವಿರ ರೂ ಮೌಲ್ಯದ ನೀಲಿ ಬಣ್ಣದ ಸುಜುಕಿ ಎಕ್ಸಿಸ್ ಸ್ಕೂಟಿ ಕಾಣೆಯಾಗಿರುವ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದಾರೆ.




