ಶಿವಮೊಗ್ಗ: ಕೇಂದ್ರ ಸರ್ಕಾರದ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ ಮಾನ್ಯತೆಗೆ ಇದೀಗ ಇನ್ನೊಂದು ತಳಿ ದೊರೆತಿದೆ. ಅದುವೇ ರುದ್ರಾಕ್ಷಿ ಹಲಸು!
ಹೊಸನಗರದ ಬರುವೆ ಗ್ರಾಮದ ಅನಂತಮೂರ್ತಿ ಜವಳಿ ಅವರು ಹಳದಿ ರುದ್ರಾಕ್ಷಿ ಹಲಸು ಬೆಳೆದಿದ್ದಾರೆ. ಸಾಗರ ತಾಲೂಕಿನ ಆನಂದಪುರದ ಪ್ರಕಾಶನಾಯಕ್ ಅವರು ಅರೆಂಜ್ ರುದ್ರಾಕ್ಷಿ ಹಲಸು ಬೆಳೆದಿದ್ದಾರೆ. ಮಂಕಳಲೆ ಗ್ರಾಮದ ರಾಜೇಂದ್ರ ಭಟ್ಟ ಅವರು ಕೆಂಪು ಹಲಸು ಬೆಳೆದಿದ್ದಾರೆ. ಈ ಎಲ್ಲಾ ಹಸಲುಗಳು ಮರದ ಎಲ್ಲಾ ಭಾಗಗಳಲ್ಲಿ ಹಣ್ಣು ಬಿಡುವ ಸಾಮರ್ಥ್ಯವನ್ನು ಹೊಂದಿವೆ. ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ 4 ವರ್ಷಕ್ಕೆ ಹಾಗೂ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ 6 ವರ್ಷಕ್ಕೆ ಹಣ್ಣು ಬಿಡುತ್ತವೆ.
ಅಳಿವಿನಂಚಿನಲ್ಲಿರುವ ಅಪರೂಪದ ತಳಿಗಳನ್ನು ಸಂರಕ್ಷಿಸಲು ಹಾಗೂ ಬೆಳೆಗಾರರನ್ನು ಆರ್ಥಿಕವಾಗಿ ಸದೃಢಗೊಳಿಸಲು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ ಸತತ ಪ್ರಯತ್ನ ನಡೆಸುತ್ತಿದೆ.
Discussion about this post