ಕಾರವಾರ: ಕೈಗಾ ಅಣು ವಿದ್ಯುತ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಹಾದಿಮನೆ ಸಾವನಪ್ಪಿದ್ದಾರೆ.
`ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಅವರು ಸಾವನಪ್ಪಿದ್ದು, ಈ ಸಾವಿನಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಅವರ ಸಹೋದರ ಉದಯ ಹಾದಿಮನೆ ಪೊಲೀಸ್ ದೂರಿನಲ್ಲಿ ವಿವರಿಸಿದ್ದಾರೆ. ಕುಮಟಾದ ನಾಗದೇವಿ ರಸ್ತೆಯವರಾದ ನಾಗರಾಜ ಲಕ್ಷ್ಮಣ ಹಾದಿಮನೆ (58) ಎನ್‌ಪಿಸಿಐಎಲ್ ಕೈಗಾದಲ್ಲಿ ಉದ್ಯೋಗದಲ್ಲಿದ್ದರು. ಮಲ್ಲಾಪುರ ಟೌನ್‌ಶಿಪ್’ನ ಪೇಸ್ – 1ರಲ್ಲಿ ಅವರು ವಾಸವಾಗಿದ್ದರು.
ಕಳೆದ 15 ವರ್ಷಗಳಿಂದ ಮದುಮೇಹ ಹಾಗೂ ರಕ್ತದೊತ್ತಡದಿಂದ ಅವರು ಬಳಲುತ್ತಿದ್ದು, ಸ್ಥಳೀಯ ವೈದ್ಯರಿಂದ ಇದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ನಾಗರಾಜ ಹಾದಿಮನೆ ಅವರು ಡಿ 11ರಂದು ಕೈಗಾ ಅಣು ಘಟಕಕ್ಕೆ ಕೆಲಸಕ್ಕೆ ಹೋಗಿದ್ದರು. ಆಗ ಆರೋಗ್ಯದಲ್ಲಿ ಏರುಪೇರಾಗಿದ್ದು, ಅಲ್ಲಿದ್ದ ಇತರೆ ಉದ್ಯೋಗಿಗಳು ಅವರನ್ನು ಆಂಬುಲೆನ್ಸ್ ಮೂಲಕ ಮಲ್ಲಾಪುರದ ಕೆಜಿಎಸ್ ಆಸ್ಪತ್ರೆಗೆ ದಾಖಲಿಸಿದರು.
ವಿಪರೀತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಕಾರಣದಿಂದ ನಾಗರಾಜ ಹಾದಿಮನೆ ಅವರು ಸಾವನಪ್ಪಿರುವ ಬಗ್ಗೆ ಕೆಎಸ್‌ಆರ್‌ಟಿಸಿಯಲ್ಲಿ ಸಂಚಾರ ನಿಯಂತ್ರಕರಾಗಿರುವ ಅವರ ತಮ್ಮ ಉದಯ ಹಾದಿಮನೆ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.