ಕಾರವಾರ: ಸರ್ಕಾರಿ ಆಯುಷ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವ ವೈದ್ಯರ ಮೇಲೆ ರೋಗಿಯೊಬ್ಬರು ಹಲ್ಲೆ ಮಾಡಿದ್ದಾರೆ. ಆಸ್ಪತ್ರೆ ಆವರಣಕ್ಕೆ ನುಗ್ಗಿ ವೈದ್ಯರನ್ನು ಥಳಿಸಿದರೂ ವೈದ್ಯರ ಸಂಘ ಇದನ್ನು ಖಂಡಿಸಿಲ್ಲ. ಸರ್ಕಾರಿ ನೌಕರರ ಸಂಘ ಸಹ ತಮಗೂ ಇದಕ್ಕೂ ಸಂಬoಧವೇ ಇಲ್ಲ ಎಂಬoತೆ ಮೌನವಾಗಿದೆ.
ಕಾರವಾರದ ಕೆಎಚ್‌ಬಿ ಕಾಲೋನಿಯ ಹರಿ ಓಂ ಸರ್ಕಲ್ ಬಳಿ ವಾಸವಾಗಿರುವ ಸಂಗಮೇಶ ಪೆರಡಿ ಅವರು ಆಯುಷ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಡಿ 11ರಂದು ಹೊರ ರೋಗಿಗಳ ವಿಭಾಗದಲ್ಲಿ ಕರ್ತವ್ಯದ್ದ ಅವರ ಮೇಲೆ ವಿನೋದ ಮಾಳಸೇಕರ್ ಎಂಬಾತರು ದಾಳಿ ನಡೆಸಿದ್ದಾರೆ.
ವಿನೋದ ಮಾಳ್ಸೆಕರ್ ಅವರು ಫೈಲ್ಸ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಯುಷ್ ಆಸ್ಪತ್ರೆಗೆ ಬಂದಿದ್ದರು. ಡಾ ಸಂಗಮೇಶ ಅವರು ಚಿಕಿತ್ಸೆ ನೀಡಿದ ನಂತರ ಔಷಧಿ ಬರೆದು ಕೊಟ್ಟಿದ್ದರು. ಫಾರ್ಮಸಿಯಿಂದ ಔಷಧ ಡಬ್ಬಿ ಹಿಡಿದು ಬಂದ ವಿನೋದ ಮಾಳ್ಸೆಕರ್ ಮೊದಲು ಕೆಟ್ಟ ಶಬ್ದದಿಂದ ನಿಂದಿಸಿದ್ದಾರೆ.
ಅದಾದ ನಂತರ `ಸೀಲ್ ಆಗಿರುವ ಡಬ್ಬ ಕೊಡು’ ಎಂದು ಕೂಗಾಡಿ ವೈದ್ಯರ ಕೆನ್ನೆ ಮೇಲೆ ಬಾರಿಸಿದ್ದಾರೆ. ನೋವಿನಿಂದ ಬಳಲಿದ ಡಾ. ಸಂಗಮೇಶ ಪರಡಿ ಅವರಿಗೆ ಜ್ವರ ಬಂದಿದ್ದು, ಅವರು ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಯುಷ್ ಇಲಾಖೆ ಅಧಿಕಾರಿಯಾಗಿರುವ ಸಂಜೀವಕುಮಾರ ನಾಯ್ಕ ಅವರೇ ಸರ್ಕಾರಿ ನೌಕರರ ಸಂಘದ ಸಂಘದ ಜಿಲ್ಲಾ ಅಧ್ಯಕ್ಷರು. ಅದಾಗಿಯೂ ಆಯುಷ್ ಇಲಾಖೆ ವೈದ್ಯರ ಮೇಲೆ ನಡೆದ ಹಲ್ಲೆಯ ಬಗ್ಗೆ ನೌಕರರ ಸಂಘವೂ ಮೌನವಾಗಿದೆ. ವೈದ್ಯರ ಮೇಲೆ ಹಲ್ಲೆಯ ಕುರಿತು ಪ್ರತಿಕ್ರಿಯೆಗಾಗಿ ಸಂಜೀವಕುಮಾರ ನಾಯ್ಕ ಅವರಿಗೆ ಫೋನ್ ಮಾಡಿದಾಗ ಕರೆ ಸ್ವೀಕರಿಸಿಲ್ಲ.