ಶಿರಸಿ ಬಪ್ಪನಕೊಡ್ಲುವಿನ ಕುಂಬರಿಗುಡ್ಡೆಯ ಕಲ್ಲಿನ ಗುಹೆಯಲ್ಲಿ ತಪಸ್ಸು ನಡೆಸಿ ಆಧ್ಯಾತ್ಮ ಶಕ್ತಿ ಪಡೆದವರು ಶಿವಾನಂದ ಸ್ವಾಮೀಜಿ. ಕೊಳಗಿಬೀಸಿನ ಅವದೂತ ಸ್ವಾಮೀಜಿ, ಶ್ರೀಧರ ಸ್ವಾಮೀಜಿ ಅವರನ್ನು ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಸಾಧನೆ ಮಾಡಿದ ಶಿವಾನಂದ ಸ್ವಾಮೀಜಿ ಯಲ್ಲಾಪುರದ ನಾಯ್ಕನಕೆರೆಯಲ್ಲಿ ನೆಲೆ ನಿಂತರು. ಪ್ರಸ್ತುತ ನಾಯ್ಕನಕೆರೆಯ ಭವ್ಯ ಪರಿಸರದಲ್ಲಿ ದಿವ್ಯ ದತ್ತ ಮಂದಿರ ನಿರ್ಮಾಣವಾಗುತ್ತಿದ್ದು, ಈ ಹಿಂದೆ ಇದ್ದ ದೇಗುಲ ಜೀರ್ಣೋದ್ಧಾರಕ್ಕೆ ಸ್ವಾಮೀಜಿಯವರ ಕೊಡುಗೆ ಅಪಾರ.

ಕೊಳಗಿಬೀಸಿನ ಬಳಿ ಆರು ವರ್ಷಗಳ ವನಪ್ರಸ್ತಾಶ್ರಮ ನಡೆಸಿದ್ದ ಶಿವಾನಂದ ಸ್ವಾಮೀಜಿಯವರು ಅಲ್ಲಿನ ಗುಡ್ಡಗಾಡುಗಳಲ್ಲಿ ಬೆಳೆದ ಗಡ್ಡೆ-ಗೆಣಸು ಹಾಗೂ ಎಲೆಗಳನ್ನು ಸೇವಿಸಿ ಧ್ಯಾನ ಮಾಡುತ್ತಿದ್ದರು. 1963ರ ಅವಧಿಯಲ್ಲಿ ದತ್ತ ಮಂದಿರದ ಪೂಜಾ ಕಾರ್ಯಕ್ಕಾಗಿ ಸ್ಥಳೀಯರು ಯೋಗ್ಯರನ್ನು ಹುಡುಕಾಡುತ್ತಿರುವಾಗ ಅವಧೂತರ ಆದೇಶದ ಪ್ರಕಾರ ನಾಯ್ಕನಕೆರೆಗೆ ಬಂದ ಶಿವಾನಂದ ಸ್ವಾಮೀಜಿ ದತ್ತ ಮಂದಿರದ ಉಸ್ತುವಾರಿವಹಿಸಿಕೊಂಡರು.
ಇದನ್ನೂ ಓದಿ: ಮೂರೇ ತಿಂಗಳಿನಲ್ಲಿ ನಿರ್ಮಾಣವಾದ ಕೋಟಿ ರೂ ವೆಚ್ಚದ ಮಂದಿರ!
ಆ ಅವಧಿಯಲ್ಲಿ ದತ್ತ ಮಂದಿರ ಗರ್ಭಗುಡಿಯನ್ನು ಮಾತ್ರ ಹೊಂದಿತ್ತು. ಶಿವಾನಂದ ಸ್ವಾಮೀಜಿಯವರು ಇಲ್ಲಿ ಗಂಟೆ ಮಂಟಪ, ಚಂದ್ರಶಾಲೆ, ಗೋಶಾಲೆಗಳನ್ನು ಮಾಡಿದರು. ಅಪಾರ ದಾನಿಗಳು ಈ ಕಾರ್ಯಗಳಿಗೆ ಆರ್ಥಿಕ ನೆರವು ನೀಡಿದರು. ಆ ಕಾಲದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಭಾಗಿಯಾಗಿದ್ದರು. ಸರಿಸುಮಾರು ಎರಡು ದಶಕಗಳ ಕಾಲ ಶಿವಾನಂದ ಸ್ವಾಮೀಜಿಯವರು ನಾಯ್ಕನಕೆರೆಯಲ್ಲಿ ನೆಲೆನಿಂತರು.
ಶಿವಾನ0ದ ಸ್ವಾಮೀಜಿಯವರಿಗೆ ವಯಸ್ಸಾದಾಗ ಅವರ ಪೂರ್ವಾಶ್ರಮದ ಮಕ್ಕಳ ಪೈಕಿ ಒಬ್ಬರಾದ ಸೀತಾರಾಮ ಹೆಗಡೆ ಅವರು ದತ್ತ ಮಂದಿರ ಪ್ರವೇಶ ಮಾಡಿದರು. ಸ್ವಾಮೀಜಿ ಸೇವೆ ಜೊತೆ ದೇವರ ಪೂಜೆಯ ಹೊಣೆಯನ್ನು ಸೀತಾರಾಮ ಹೆಗಡೆ ಅವರುವಹಿಸಿಕೊಂಡರು. 1984ರಲ್ಲಿ ಶಿವಾನಂದ ಸ್ವಾಮೀಜಿ ಮುಕ್ತಿ ಪಡೆದಿದ್ದು, ಅವರ ಇಚ್ಚೆಗನುಸಾರವಾಗಿ ಇದೇ ಕ್ಷೇತ್ರದಲ್ಲಿ ಅವರ ಸಮಾಧಿ ನಡೆಯಿತು.
ಇದನ್ನು ಓದಿ: ದತ್ತ ಮಂದಿರದ ವಿಶೇಷತೆಗಳೇನು?

ಶಿವಾನಂದ ಸ್ವಾಮೀಜಿಯವರ ಪೂರ್ವಾಶ್ರಮದ ಕುಟುಂಬದವರಾದ ಅಶೋಕ ಹೆಗಡೆ ಅವರು ಪ್ರಸ್ತುತ ಈ ದೇವಾಲಯದ ಅರ್ಚಕರಾಗಿದ್ದಾರೆ. ಅಶೋಕ ಹೆಗಡೆ ಅವರು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳನ್ನು ಹೊಸನಗರಲ್ಲಿ ಭೇಟಿ ಮಾಡಿ ದತ್ತ ಮಂದಿರದ ಜೀರ್ಣೋದ್ಧಾರದ ಬಗ್ಗೆ ಪ್ರಸ್ತಾಪಿಸಿದ್ದರು. ಇದರ ಮುಂದುವರೆದ ಭಾಗವಾಗಿ 2008ರಲ್ಲಿ ರಾಮಚಂದ್ರಾಪುರ ಮಠದವರು ದತ್ತ ಮಂದಿರದ ಉಸ್ತುವಾರಿಯನ್ನು ಮಠದ ಪ್ರತಿನಿಧಿ ಎಸ್ ವಿ ಯಾಜಿ ಅವರಿಗೆವಹಿಸಿದರು.
ಇದನ್ನು ಓದಿ: ದೇವಾನುದೇವತೆಗಳು ಪುಣ್ಯಭೂಮಿ ಈ ದೇಗುಲ!
ಅದರ ಪ್ರಕಾರ 2023ರ ದತ್ತ ಜಯಂತಿ ದಿನ ರಾಘವೇಶ್ವರ ಭಾರತೀ ಶ್ರೀಗಳು ಮುಂದಿನ ದತ್ತ ಜಯಂತಿಯ ಒಳಗೆ ದೇವಾಲಯದ ಜೀರ್ಣೋದ್ಧಾರ ನಡೆಸಲು ಸಂಕಲ್ಪಿಸಿದರು. ಏಳು ದಶಕಗಳಿಂದಲೂ ದೇಗುಲದ ಪೂಜಾ ಕಾರ್ಯವನ್ನು ಹೆಗಡೆ ಕುಟುಂಬದವರು ನಡೆಸುತ್ತಿದ್ದಾರೆ. ಪ್ರಸ್ತುತ ಅದೇ ಕುಟುಂಬದ ಈಗಿನ ಅರ್ಚಕ ಅಶೋಕ ಹೆಗಡೆ ಅವರು ನೂತನ ದೇವಾಲಯಕ್ಕೆ 1.96 ಲಕ್ಷ ರೂ ವೆಚ್ಚದ ದತ್ತ ಮೂರ್ತಿಯನ್ನು ಕೊಡುಗೆಯಾಗಿ ನೀಡಿದ್ದಾರೆ.
ಇದನ್ನು ಓದಿ: ದತ್ತ ಮಂದಿರದಲ್ಲಿ ತ್ರಿಮೂರ್ತಿ ದರ್ಶನ!
ಅನಾಧಿಕಾಲದಿಂದಲೂ ಶಿವಾನಂದ ಸ್ವಾಮೀಜಿ ಅವರ ಪೂರ್ವಾಶ್ರಮದ ಕುಟುಂಬದವರು ದತ್ತ ಮಂದಿರದ ಸೇವೆಯಲ್ಲಿರುವುದನ್ನು ತಿಳಿದು ಅದೇ ಮನೆತನದ ವನಜಾಕ್ಷಿ ಹೆಬ್ಬಾರ್ ಸಂತಸ ವ್ಯಕ್ತಪಡಿಸಿದರು.