ಜೊಯಿಡಾ: ಚಹಾ ಹೊಟೇಲ್’ನಲ್ಲಿ ಸರಾಯಿ ಮಾರುತ್ತಿದ್ದ ಎರಡು ಹೊಟೇಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ರಾಮನಗರದ ರಾಮಲಿಂಗಗಲ್ಲಿಯ ಕಿರಣ ದೇಸಾಯಿ ಹಾಗೂ ನವೀನ ಗಂಗೈಕರ್ ತಮ್ಮ ಹೊಟೇಲಿನಲ್ಲಿ ಸರಾಯಿ ಸೇವನೆಗೆ ಅವಕಾಶ ಕೊಟ್ಟು ಸಿಕ್ಕಿ ಬಿದ್ದಿದ್ದಾರೆ. ಪುಟ್ಟ ಹೊಟೇಲ್ ನಡೆಸುವ ಈ ಇಬ್ಬರೂ ಅಲ್ಲಿ ಬರುವ ಗ್ರಾಹಕರಿಗೆ ಮದ್ಯ ಪೂರೈಸುತ್ತಿದ್ದರು. ಜೊತೆಗೆ ಅಲ್ಲಿಯೇ ಮದ್ಯ ಸೇವನೆಗೆ ಅವಕಾಶ ಕೊಟ್ಟಿದ್ದರು. ಆದರೆ, ಇದಕ್ಕೆ ಅನುಮತಿ ಪಡೆದಿರಲಿಲ್ಲ.
ಈ ವಿಷಯ ಅರಿತ ಪಿಎಸ್‌ಐ ಬಸವರಾಜ ಮಬನೂರು ಹೊಟೇಲ್ ಮೇಲೆ ದಾಳಿ ಮಾಡಿದರು. ವಿವಿಧ ಬಗೆಯ ಮದ್ಯಗಳ ಜೊತೆ ಖಾಲಿ ಗ್ಲಾಸುಗಳನ್ನು ವಶಕ್ಕೆ ಪಡೆದರು. ಚಹಾ ಹೊಟೇಲ್ ಮಾಲಕರ ವಿರುದ್ಧ ಪ್ರಕರಣವನ್ನು ದಾಖಲಿಸಿದರು.