ಮುಂಡಗೋಡ: ಲಕ್ಕೊಳ್ಳಿ ಗ್ರಾಮದ ಗದ್ದೆ ಅಂಚಿನ ಅರಣ್ಯದಲ್ಲಿ ಚಿರತೆಯೊಂದು ನರಿಯನ್ನು ಅರೆಬರೆಯಾಗಿ ಭಕ್ಷಿಸಿದೆ. ನರಿ ಮುಖ ಭಾಗವನ್ನು ಮಾತ್ರ ಜೀರ್ಣಿಸಿಕೊಂಡ ಚಿರತೆ ದೇಹವನ್ನು ಮರಕ್ಕೆ ಸಿಕ್ಕಿಸಿ ಕಾಡಿನ ದಾರಿ ಹಿಡಿದಿದೆ.
ಗದ್ದೆ ಕೆಲಸಕ್ಕೆ ಹೋಗಿದ್ದ ಮಹಿಳೆಯೊಬ್ಬರು ನರಿಯ ಶವ ನೋಡಿದರು. ಭಯಗೊಂಡ ಅವರು ಊರಿನ ಜನರನ್ನು ಕಾಡಿಗೆ ತಂದು ತೋರಿಸಿದರು. ಅರಣ್ಯ ಸಿಬ್ಬಂದಿ ಸಹ ಈ ವಿಷಯ ಅರಿತು ಸ್ಥಳಕ್ಕೆ ಬಂದರು.
ಅರಣ್ಯ ಅಧಿಕಾರಿಗಳು ಮರದ ಕೆಳಗಿನ ಹೆಜ್ಜೆ ಗುರುತು ಗಮನಿಸಿ ಚಿರತೆ ದಾಳಿ ನಡೆಸಿದನ್ನು ಖಚಿತಪಡಿಸಿದರು. `ಈ ಭಾಗದಲ್ಲಿ ಆಗಾಗ ಚಿರತೆ ಓಡಾಟ ಕಂಡು ಬಂದಿದ್ದರಿAದ ಜನ ಎಚ್ಚರವಹಿಸಬೇಕು’ ಎಂದು ಅರಣ್ಯ ಸಿಬ್ಬಂದಿ ಹೇಳಿದರು.
`ರೈತರು ಒಬ್ಬರೇ ಕಾಡಿಗೆ ಹೋಗಬಾರದು. ಸಂಜೆ 6 ಗಂಟೆ ಒಳಗೆ ಮನೆ ತಲುಪಬೇಕು’ ಎಂದು ಮನವಿ ಮಾಡಿದರು. `ಈ ಭಾಗದಲ್ಲಿ ಚಿರತೆ ಓಡಾಟ ಸಹಜ. ಆದರೆ, ಈವರೆಗೂ ಮಾನವರ ಮೇಲೆ ದಾಳಿ ನಡೆಸಿಲ್ಲ. ಅದಾಗಿಯೂ ಎಚ್ಚರಿಕೆವಹಿಸುವುದು ಸೂಕ್ತ’ ಎಂದು ಮುಂಡಗೋಡ ವಲಯ ಅರಣ್ಯಾಧಿಕಾರಿ ವಾಗೀಶ ಬಿ ಜೆ ಹೇಳಿದರು.