ಮುಂಡಗೋಡ: ಹುನಗುಂದ ಗ್ರಾಮದ ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿಸಿದ್ದಾರೆ. ಒಂದು ಮನೆಯಲ್ಲಿ ಕಳ್ಳತನ ನಡೆಸಿದ್ದು, ಇನ್ನೊಂದು ಮನೆಯಲ್ಲಿ ಏನೂ ಸಿಗದ ಕಾರಣ ನಿರಾಸೆಯಿಂದ ತೆರಳಿದ್ದಾರೆ.
ದೇವಕ್ಕ ವಡ್ಡರ್ ಅವರ ಮನೆಯಲ್ಲಿ 25 ಸಾವಿರ ರೂ ಹಣ ನಾಪತ್ತೆಯಾಗಿದೆ. ಇದರೊಂದಿಗೆ ಅವರ ಮನೆಯಲ್ಲಿದ್ದ ಅರ್ದ ತೊಲೆ ಚಿನ್ನವನ್ನು ಕಳ್ಳರು ಎಗರಿಸಿದ್ದಾರೆ.
ಇದೇ ಊರಿನ ಹಸನಸಾಬ ಮೊರಬ ಅವರ ಮನೆಗೆ ಸಹ ಕಳ್ಳರು ನುಗ್ಗಿದ್ದಾರೆ. ಆದರೆ, ಅಲ್ಲಿ ಅವರಿಗೆ ಕಳ್ಳತನಕ್ಕೆ ಯಾವುದೇ ವಸ್ತು ಸಿಕ್ಕಿಲ್ಲ. ಹೀಗಾಗಿ ಅವರ ಮನೆಯ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿಸಿ ಪರಾರಿಯಾಗಿದ್ದಾರೆ.