ಯಲ್ಲಾಪುರ: ಗಸ್ತು ಅರಣ್ಯ ಪಾಲಕ ಹಾಗೂ ವೀಕ್ಷಕರ ಸಂಘದ ವಿಭಾಗೀಯ ಅಧ್ಯಕ್ಷರಾಗಿ ಶಾನವಾಜ ಮುಲ್ತಾನಿ ಹಾಗೂ ಕಾರ್ಯದರ್ಶಿಯಾಗಿ ಕೆಂಚಪ್ಪ ಹಂಚಿನಾಳ ಆಯ್ಕೆಯಾಗಿದ್ದಾರೆ.
ಶಾನವಾಜ ಮುಲ್ತಾನಿ ಅವರು ಪ್ರಸ್ತುತ ಯಲ್ಲಾಪುರ ವಲಯದಲ್ಲಿ ಕರ್ತವ್ಯದಲ್ಲಿದ್ದಾರೆ. ಕೆಂಚಪ್ಪ ಹಂಚಿನಾಳ ಅವರು ಇಡಗುಂದಿ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅರಣ್ಯ ಅಕ್ರಮ ತಡೆ ಜೊತೆ ಸಾರ್ವಜನಿಕರ ಜೊತೆ ಸಹಬಾಳ್ವೆಯಿಂದ ವರ್ತಿಸುವ ಗುಣವನ್ನು ಅವರು ಹೊಂದಿದ್ದಾರೆ.
ಸoಘದ ಉಪಾಧ್ಯಕ್ಷರಾಗಿ ಮುಂಡಗೋಡ ವಲಯದ ದೇವರಾಜ ಆಡಿನ್, ಖಜಾಂಚಿಯಾಗಿ ಕಾತೂರು ವಲಯದ ಬಸನಗೌಡ ಬಿರಾದಾರ, ಜಂಟಿ ಕಾರ್ಯದರ್ಶಿಯಾಗಿ ಕಿರವತ್ತಿ ವಲಯದ ಸಿದ್ದೇಶ್ವರ ಕುಬಸದ, ಕ್ರೀಡಾ ಕಾರ್ಯದರ್ಶಿಯಾಗಿ ಮುಂಡಗೋಡ ವಲಯದ ಮುಸ್ತಾಕ ಅಲ್ಲಿ ಒಂಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಿರವತ್ತಿ ವಲಯದ ರೇವಣಸಿದ್ದ ಕೋಳಿ ಆಯ್ಕೆಯಾದರು.
ಉಳಿದಂತೆ ಸಂಘಟನಾ ಕಾರ್ಯದರ್ಶಿಯಾಗಿ ಯಲ್ಲಾಪುರ ವಲಯದ ಅಲ್ಮಾಸ್ ಬಿ, ಮಂಚಿಕೇರಿ ವಲಯದ ಬಸವರಡ್ಡಿ ರಡ್ಡೆರು, ಕಿರವತ್ತಿ ವಲಯದ ಮೀಠಾಭಾಯಿ ಚವ್ಹಾಣ, ಇಡಗುಂದಿ ವಲಯದ ಚಂದ್ರಹಾಸ ಪಟಗಾರ, ಕಾತೂರು ವಲಯದ ವಿನಾಯಕ ಸುಂಕದ, ಮುಂಡಗೊಡ ವಲಯ ಮರ್ದಾನ ಅಲಿ ಕಳಸ ಅವರನ್ನು ಆರಿಸಲಾಯಿತು.
ಇನ್ನೂ ಸಂಘದ ನಾಮನಿರ್ದೇಶನ ಸದಸ್ಯರಾಗಿ ಯಲ್ಲಾಪುರ ವಲಯದ ನಾಮದೇವ ಲಮಾಣಿ ಹಾಗೂ ಇಡಗುಂದಿ ವಲಯದ ಕಾಶಿನಾಥ ಯಂಕoಚಿ ಆಯ್ಕೆಯಾದರು. ಯಲ್ಲಾಪುರ ಸಸ್ಯ ಉದ್ಯಾನದಲ್ಲಿ ನಡೆದ ಸಭೆಯಲ್ಲಿ ಈ ಎಲ್ಲಾ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.