ಕಾರವಾರ, ಹೊನ್ನಾವರ ಹಾಗೂ ದಾಂಡೇಲಿಯಲ್ಲಿ ಮಟ್ಕಾ ಆಡಿಸುತ್ತಿದ್ದವರ ಮೇಲೆ ಪೊಲೀಸರ ದಾಳಿ ನಡೆದಿದೆ. ಬೇರೆ ಬೇರೆ ಉದ್ಯೋಗವಿದ್ದರೂ ಹೆಚ್ಚಿನ ಹಣದ ಆಸೆಗೆ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಕಾರವಾರ: ಮುದುಗಾದ ಮೇಲಿನಕೇರಿ ರಸ್ತೆಯಲ್ಲಿ ಅದೇ ಊರಿನ ಜಗದೀಶ ಕಂತ್ರಿಕರ್ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಡಿ 16ರ ಸಂಜೆ ಪೊಲೀಸ್ ಉಪನಿರೀಕ್ಷಕ ನೇಹಲ್ ಖಾನ್ ಅವರ ಮೇಲೆ ದಾಳಿ ನಡೆಸಿ ಜನರಿಂದ ಸಂಗ್ರಹಿಸಿದ್ದ 600ರೂ ಹಣದ ಜೊತೆ ಮಟ್ಕಾ ಸಾಮಗ್ರಿ ಜಪ್ತು ಮಾಡಿದರು.
ಹೊನ್ನಾವರ: ಅಂಗಡಿ ವ್ಯಾಪಾರ ನಡೆಸುವ ಮೂಡ್ಕಣಿ ಪಂಡುಮಕ್ಕಿಯ ಗುರುಪಾದ ನಾಯ್ಕ ಸಹ ಜೂಜಾಟ ನಡೆಸುವಾಗ ಪಿಎಸ್‌ಐ ಮಮತಾ ನಾಯ್ಕ ದಾಳಿ ನಡೆಸಿದ್ದಾರೆ. ಮೂಡ್ಕಣಿ ಚರ್ಚ ಕ್ರಾಸಿನ ಬಳಿ ಡಿ 18ರಂದು ನಡೆದ ದಾಳಿಯ ವೇಳೆ ಗುರುಪಾದ ನಾಯ್ಕ ಅವರ ಬಳಿ 720ರೂ ಮಟ್ಕಾ ಹಣ ಸಿಕ್ಕಿದೆ. ಇದರೊಂದಿಗೆ ಮಟ್ಕಾ ಪರಿಕ್ಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾಂಡೇಲಿ: ಡಿಎಫ್‌ಎ ಟೌನ್‌ಶಿಪ್ ಬಳಿ ವೆಲ್ಡಿಂಗ್ ಕೆಲಸ ಮಾಡುವ ತಿಮ್ಮಣ್ಣ ಅಗಸಿಮನಿ ಸಹ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಡಿ 18ರಂದು ಸೋಮಾನಿ ಸರ್ಕಲ್ ಬಳಿಯ ನಂದಗೋಕುಲ ಉದ್ಯಾನದ ಬಳಿ ತಿಮ್ಮಣ್ಣ ಓಸಿ ಆಟದಲ್ಲಿದ್ದಾಗ ಪಿಎಸ್‌ಐ ಅಮೀನಸಾಬ್ ಅತ್ತಾರ್ ಅವರ ಮೇಲೆ ದಾಳಿ ನಡೆಸಿದರು. ಆಗ ಮಟ್ಕಾ ಚೀಟಿ ಜೊತೆ ಸಂಗ್ರಹಿಸಿದ್ದ 670 ರೂ ಹಣ ಸಿಕ್ಕಿದೆ. ವಿವಿಧ ಮಟ್ಕಾ ಪರಿಕ್ಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.