ಅಂಕೋಲಾ: ರಾತ್ರಿ ವೇಳೆ ಈಶ್ವರ ದೇವಾಲಯದ ಒಳಗೆ ಪ್ರವೇಶಿಸಿದ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ ಹಣದ ಜೊತೆ ಡಬ್ಬಿಯನ್ನು ಅಪಹರಿಸಿದ್ದಾರೆ.
ಅಂಕೋಲಾ ವಾಸರ ಕುದ್ರಿಗೆಯ ಈಶ್ವರ ದೇವಾಲಯದಲ್ಲಿ ಡಿ 9ರಂದು ಈ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಊರಿನವರು ಹಾಗೂ ದೇವಾಲಯ ಆಡಳಿತ ಮಂಡಳಿ ಸಭೆ ಸೇರಿ ಅಲ್ಲಿ ನಿರ್ಣಯಿಸಿದ ಪ್ರಕಾರ ಇದೀಗ ಕಳ್ಳರ ಪತ್ತೆಗೆ ಪೊಲೀಸರ ಮೊರೆ ಹೋಗಿದ್ದಾರೆ.
`ವಾಸರ ಕುದುರಿಗೆಯ ಈಶ್ವರ ದೇವಾಲಯದ ಬಾಗಿಲು ಮುರಿದು ಕಳ್ಳರು ಒಳ ನುಗ್ಗಿದ್ದು, 2 ಸಾವಿರ ರೂ ಮೌಲ್ಯದ ಕಾಣಿಕೆ ಡಬ್ಬಿ ಹಾಗೂ ಅದರ ಒಳಗಿದ್ದ ಕಾಸು ಎಗರಿಸಿದ್ದಾರೆ’ ಎಂದು ಅಲ್ಲಿನ ಗ್ರಾ ಪಂ ಅಧ್ಯಕ್ಷ ಪ್ರದೀಪ ನಾಯಕ ಪೊಲೀಸ್ ದೂರು ನೀಡಿದ್ದಾರೆ. `ಕಳ್ಳರನ್ನು ಪತ್ತೆ ಮಾಡಿ, ದೇವರ ಕಾಸು ಮರಳಿಸಿ’ ಎಂದವರು ಕೇಳಿಕೊಂಡಿದ್ದಾರೆ.