6
  • Latest

ಕರಡಿ ದಾಳಿ | ಗಾಯದ ಮೇಲೆ ಇನ್ನೊಂದು ಬರೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕರಡಿ ದಾಳಿ | ಗಾಯದ ಮೇಲೆ ಇನ್ನೊಂದು ಬರೆ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಮುದ್ದಾದ ಮಗಳ ಕಣ್ಮರೆಯಿಂದ ಮಾನಸಿಕವಾಗಿ ನೊಂದಿದ್ದ ಹುತ್ಕಂಡದ ಆರ್ ಎಸ್ ಭಟ್ಟ ಅವರ ಮೇಲೆ ಕರಡಿ ದಾಳಿ ನಡೆದಿದ್ದು, ದೈಹಿಕವಾಗಿಯೂ ಅವರು ನಿತ್ರಾಣಗೊಂಡಿದ್ದಾರೆ. ಪಿಎಲ್‌ಡಿ ಬ್ಯಾಂಕಿನ ಚುನಾವಣೆ ನಿಮಿತ್ತ ಓಡಾಡುತ್ತಿದ್ದ ಆರ್ ಎಸ್ ಭಟ್ಟರ ಮೇಲೆ ಶನಿವಾರ ಬೆಳಗ್ಗೆ ಮೂರು ಕರಡಿಗಳು ಆಕ್ರಮಣ ನಡೆಸಿವೆ. ಪರಿಣಾಮ ಅವರ ಕೈ-ಕಾಲು, ಮೈ-ಮುಖಗಳಿಗೆ ಭಾರೀ ಪ್ರಮಾಣದಲ್ಲಿ ಗಾಯವಾಗಿದೆ.

ಯಲ್ಲಾಪುರದ ಚಂದ್ಗುಳಿ ಉಪಳೇಶ್ವರ ಹುತ್ಕಂಡ ಭಾಗದಲ್ಲಿ ಮೂರು ಕರಡಿಗಳು ಸಂಚರಿಸುತ್ತಿದ್ದು, ಬೆಳಗ್ಗೆ 7 ಗಂಟೆ ಅವಧಿಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಭಟ್ಟರನ್ನು ಅವು ಬೆನ್ನತ್ತಿದವು.  ಮಾಯನಜಡ್ಡಿ ಮಾರ್ಗದ ಕಸ ವಿಲೇವಾರಿ ಘಟಕದ ಬಳಿ ಎರಡು ದೊಡ್ಡ ಕರಡಿ ಹಾಗೂ ಒಂದು ಮರಿ ನೋಡಿದ ಆರ್ ಎಸ್ ಭಟ್ಟರು ಬೈಕಿನ ವೇಗ ಹೆಚ್ಚಿಸಿದರು. ಅದಾಗಿಯೂ ಬೈಕಿನಿಂದ ಅವರನ್ನು ಬೀಳಿಸಿದ ಮೂರು ಕರಡಿಗಳು ಮೊದಲು ಕಾಲಿಗೆ ಕಚ್ಚ ಕಚ್ಚಿ ಆಕ್ರಮಣ ಮಾಡಿದವು. ನಂತರ ಬಟ್ಟೆ ಹರಿದು ಮೈ-ಕೈಗಳಿಗೆ ಕಚ್ಚಿ ಗಾಯಗೊಳಿಸಿದವು.

ಆರ್ ಎಸ್ ಭಟ್ಟ ಅವರ ಮುಖ, ಭುಜ ಹಾಗೂ ತೊಡೆ ಭಾಗಕ್ಕೆ ಭಾರೀ ಪ್ರಮಾಣದಲ್ಲಿ ಗಾಯವಾಗಿದೆ. ನೆಲಕ್ಕೆ ಬಿದ್ದ ಅವರು ಸಾವರಿಸಿಕೊಂಡು ಮನೆ ಸೇರಿದ್ದು, ಕುಟುಂಬದವರು ಭಟ್ಟರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಹುಬ್ಬಳ್ಳಿಗೆ ಕರೆದೊಯ್ಯಲಾಯಿತು.

ಆರ್ ಎಸ್ ಭಟ್ಟ ಅವರು ಚಂದ್ಗುಳಿ ಗ್ರಾಮ ಪಂಚಾಯತ ಸದಸ್ಯರು. ಜೊತೆಗೆ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರಾಗಿದ್ದಾರೆ. ಕಳೆದ ವರ್ಷ ಇದೇ ದಿನ ಅಂದರೆ ಡಿಸೆಂಬರ್ 21ರಂದು ಆರ್ ಎಸ್ ಭಟ್ಟ ಅವರ ಮಗಳು ತೇಜಾ ನಿಗೂಡವಾಗಿ ಕಾಣೆಯಾಗಿದ್ದರು. ಅವರು ಈವರೆಗೂ ಸಿಕ್ಕಿಲ್ಲ. ಮಗಳು ಕಾಣೆಯಾದ ಕಾರಣ ಕಳೆದ ಒಂದು ವರ್ಷದಿಂದ ಆರ್ ಎಸ್ ಭಟ್ಟ ಅವರು ಮಾನಸಿಕ ನೋವು ಅನುಭವಿಸುತ್ತಿದ್ದಾರೆ. ಇದೀಗ ಕರಡಿ ದಾಳಿಯಿಂದ ದೈಹಿಕವಾಗಿಯೂ ಅವರು ಕುಗ್ಗಿದ್ದು, ಕುಟುಂಬದವರು ದಿಕ್ಕೇ ತೋಚದಂತೆ ಮೌನವಾಗಿದ್ದಾರೆ.

ShareSendTweetShare
Previous Post

ಕಾನೂನು ಅರಿವು | ಜನ ಜಾಗೃತಿಯೇ ಪೊಲೀಸರ ಗುರಿ!

Next Post

ವನ್ಯಜೀವಿ ಸಂಘರ್ಷ | ಜಾಗೃತರಾಗಿರಿ ಜೊತೆಗೆ ಸಲಹೆ ಕೊಡಿ!

Next Post

ವನ್ಯಜೀವಿ ಸಂಘರ್ಷ | ಜಾಗೃತರಾಗಿರಿ ಜೊತೆಗೆ ಸಲಹೆ ಕೊಡಿ!

ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದ ಕಳ್ಳ ಕೃಷ್ಣ!

ಕಬ್ಬಡ್ಡಿ | ಸೈನಿಕನ ತಂಡಕ್ಕೆ ಸಿಕ್ಕ ಜಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.