ಶಿರಸಿ: ವ್ಯಾಪಾರಸ್ಥರ ಕಾಸು ಕದಿಯುತ್ತಿದ್ದ ಬಾಲಕನೊಬ್ಬ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದು, ಆತನ ವಿರುದ್ದ `ಕಠಿಣ ಕ್ರಮ’ ಜಾರಿಯಾಗಿಲ್ಲ. ಊರಿನವರೆಲ್ಲ ಸೇರಿ ಆತನಿಗೆ ಬುದ್ದಿ ಹೇಳಿ ಬಿಡುಗಡೆ ಮಾಡಿದ್ದಾರೆ!
ಆರು ವರ್ಷದ ಬಾಲಕನೊಬ್ಬ ಶಿರಸಿಯ ತರಕಾರಿ ಮಾರುಕಟ್ಟೆಗೆ ಪ್ರವೇಶಿಸಿದ್ದು, ಅಲ್ಲಿನ ತರಕಾರಿ ಮಳಿಗೆ ಬಳಿ ಸುತ್ತಾಡಿದ್ದಾನೆ. ಯಾರೂ ಇಲ್ಲದಿರುವುದನ್ನು ನೋಡಿ ಆತ ಅಲ್ಲಿದ್ದ ಕಾಸಿನ ಡಬ್ಬಿಗೆ ಕೈ ಹಾಕಿದ ಚಿತ್ರಣ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಾರ್ವಜನಿಕರು ಆತನನ್ನು ಹಿಡಿದಾಗ ಮೊದಲು ಆತ ಕಳ್ಳತನ ಒಪ್ಪಿಕೊಂಡಿಲ್ಲ. ನಂತರ ಕ್ಯಾಮರಾ ಕಂಡು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಎಲ್ಲರೂ ಸೇರಿ ಆತನಿಗೆ ಬುದ್ದಿ ಹೇಳಿದ್ದು, ಇದರಿಂದ ಬೆದರಿ ಕಣ್ಣೀರಾದ ಬಾಲಕ ಕದ್ದದನ್ನು ಹಿಂತಿರುಗಿಸಿದ್ದಾನೆ. ಕೆಲವರು `ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ಯೋಣ’ ಎಂದು ಈ ವೇಳೆ ಒತ್ತಾಯಿಸಿದರು. ಆದರೆ, ಕಾಸು ಕಳೆದುಕೊಂಡಿದ್ದ ವ್ಯಾಪಾರಿ ಇದಕ್ಕೆ ಒಪ್ಪಲಿಲ್ಲ.
ತರಕಾರಿ ಅಂಗಡಿಯಲ್ಲಿದ್ದ ಆಲುಗಡ್ಡೆಯನ್ನು ಸಹ ಆತ ತುಂಬಿಕೊAಡು ಪರಾರಿಯಾಗಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಾಲಾಕಿ ಬಾಲಕನ ವಿಡಿಯೋ ಇಲ್ಲಿ ನೋಡಿ..