ಯಲ್ಲಾಪುರ: ಕಳೆದ ಒಂದು ವಾರದಿಂದ ಬಿಸಗೋಡು ಭಾಗದಲ್ಲಿ ಕಪ್ಪು ಚಿರತೆ ಸಂಚಾರ ನಡೆಸಿದ್ದು, ಇದೀಗ ಅದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗೇರಾಳದ ಗಣೇಶ ಹೆಗಡೆ ಅವರ ಮನೆ ಅಂಗಳಕ್ಕೆ ಬಂದ ಚಿರತೆ ಅಲ್ಲಿದ್ದ ನಾಯಿಯನ್ನು ಭಕ್ಷಿಸಿದೆ. ಗಣೇಶ ಹೆಗಡೆ ಅವರ ಮನೆಯಲ್ಲಿ ಸಾಕಿದ್ದ ಮೂರು ತಿಂಗಳ ನಾಯಿ ಮರಿ ಕಾಣೆಯಾದಾಗ ಅದರ ಹುಡುಕಾಟ ನಡೆಯಿತು. ಆದರೆ, ಎಲ್ಲಿಯೂ ನಾಯಿಯ ಸುಳಿವು ಸಿಗಲಿಲ್ಲ.
ಕೊನೆಗೆ ಸಿಸಿ ಕ್ಯಾಮರಾ ದೃಶ್ಯವಳಿಗಳನ್ನು ಪರಿಶೀಲಿಸಿದಾಗ ಮನೆ ಅಂಗಳಕ್ಕೆ ಚಿರತೆ ಆಗಮಿಸಿರುವುದು ಗೊತ್ತಾಗಿದೆ. ಕ್ಷಣಮಾತ್ರದಲ್ಲಿ ಆ ಚಿರತೆ ಅಲ್ಲಿದ್ದ ನಾಯಿ ಮರಿಯನ್ನು ಹೊತ್ತೊಯ್ದಿರುವುದು ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಸಾವಗದ್ದೆ-ಬರಗದ್ದೆ ರಸ್ತೆಯ ಗಾಳಿಕೆರೆ ಘಟ್ಟದ ಮೇಲಿನ ಗ್ರಿಡ್ ಲೈನ್ ಬಳಿಯೂ ಕರಿ ಚಿರತೆ ಓಡಾಡುತ್ತಿರುವ ಬಗ್ಗೆ ಆ ಭಾಗದ ರವಿ ಭಟ್ಟ ಬರಗದ್ದೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಬಿಟ್ಟಿದ್ದಾರೆ. ಸಂಜೆ ಅವಧಿಯಲ್ಲಿ ಕಪ್ಪು ಚಿರತೆ ಓಡಾಟ ನೋಡಿರುವುದಾಗಿಯೂ ಅನೇಕರು ಹೇಳಿದ್ದಾರೆ.
ಕರಿ ಚಿರತೆ ಆಗಮನ-ನಿರ್ಗಮನದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..