ಶಿರಸಿ: ಅರಣ್ಯ ಭೂಮಿ ಹಕ್ಕು ಪಡೆದು ಫಲಾನುಭವಿಗಳ ಹೆಸರನ್ನು ಪಹಣಿಯ ಪತ್ರಿಕೆಯಲ್ಲಿ ದಾಖಲಿಸುವುದಕ್ಕಾಗಿ ಸರ್ಕಾರ ಒಂದು ತಿಂಗಳ ಗಡುವು ವಿಧಿಸಿದೆ. ಈ ಬಗ್ಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ರಾಜ್ಯ ಮಟ್ಟದ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ಮೇಲ್ವಿಚಾರಣಾ ಸಮಿತಿಯ ಸಭೆಯ ನಡಾವಳಿಕೆಯ ಅನುಷ್ಠಾನ ಮೇಲ್ಚಿಚಾರಣೆ ಸಮಿತಿ ಸಭಾ ನಡುವಳಿಕೆಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲನಿ ರಜನೀಶ್ ಅವರು ಪ್ರಕಟಿಸಿದ್ದಾರೆ. ಅದರ ಪ್ರತಿಯನ್ನು ಅರಣ್ಯ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಶಿರಸಿಯಲ್ಲಿ ಪ್ರದರ್ಶಿಸಿದರು.
`ಉತ್ತರಕನ್ನಡ ಜಿಲ್ಲೆ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಅರಣ್ಯ ಭೂಮಿ ಹಕ್ಕು ಪಡೆದು ಫಲಾನುಭವಿಗಳ ಹೆಸರನ್ನು ಪಹಣಿಯ ಪತ್ರಿಕೆಯ ಕಾಲಂ ನಂ 11ರಲ್ಲಿ ದಾಖಲಾಗದೇ ಇರುವ 3,430 ಪ್ರಕರಣಗಳಿವೆ. ಅಂಥಹ ಕಾಲಂ’ನಲ್ಲಿ ಹಕ್ಕು ದಾಖಲಿಸುವ ಸಂಬ0ಧ ಇ-ಆಡಳಿತ ಮತ್ತು ಕಂದಾಯ ಇಲಾಖೆ ಅಗತ್ಯ ಇರುವ ತಂತ್ರಾoಶ ರೂಪಿಸಲು ಕ್ರಮ ವಹಿಸುವಂತೆ ನಡುವಳಿಕೆಯಲ್ಲಿ ಸೂಚಿಸಲಾಗಿದೆ’ ಎಂದವರು ತಿಳಿಸಿದರು.
`ಅರಣ್ಯ ಭೂಮಿ ಹಕ್ಕು ಪಡೆದ ಫಲಾನುಭವಿಗಳ ಹಕ್ಕುನ್ನು ಪಹಣಿಯ ಕಾಲಂ ನಂ 11ರಲ್ಲಿ ನಮೂದಿಸಿದಲ್ಲಿ ಬುಡಕಟ್ಟು, ಸಮಾಜ ಕಲ್ಯಾಣ, ಅರಣ್ಯ ಕಂದಾಯ, ಗ್ರಾಮೀಣಭಿವೃದ್ಧಿ ಪಂಚಾಯತ್ ರಾಜ್ ಮುಂತಾದ ಇಲಾಖೆಗಳಿಂದ ಅರಣ್ಯ ಅತಿಕ್ರಮಣದಾರರಿಗೆ ರಕ್ಷಣೆ ಸಿಗಲಿದೆ. ಅರಣ್ಯವಾಸಿ ಅಭಿವೃದ್ಧಿಗೆ ಸಂಬoಧಿಸಿ ವೈಯಕ್ತಿಕ ಮತ್ತು ಭೂಮಿ ಅಭಿವೃದ್ಧಿ ಮೂಲಭೂತ ಜೀವನ ಸೌಲಭ್ಯಗಳನ್ನು ಪಡೆಯಲು ಅತಿಕ್ರಮಣದಾರರು ಅರ್ಹರಾಗುತ್ತಾರೆ’ ಎಂದವರು ವಿವರಿಸಿದರು.