ಭಟ್ಕಳ: ಬೈಕಿಗೆ ದನ ಅಡ್ಡ ಬಂದ ಪರಿಣಾಮ ಬೈಕಿನಿಂದ ಬಿದ್ದ ಇಬ್ಬರು ಗಾಯಗೊಂಡಿದ್ದಾರೆ. ಕೋಣಾರ ಸರ್ಕಾರಿ ಆಸ್ಪತ್ರೆ ಬಳಿ ಈ ಅಪಘಾತ ನಡೆದಿದೆ.
ಭಟ್ಕಳ ಹಡೀಲ್ ಸಬತ್ತಿಯ ಮಂಜುನಾಥ ನಾಯ್ಕ ಅವರು ಡಿ 22ರಂದು ಈ ಭಟ್ಕಳದಿಂದ ಕೋಣಾರ ಕಡೆ ಬೈಕ್ ಓಡಿಸುತ್ತಿದ್ದರು. ಕೋಣಾರ ಆಸ್ಪತ್ರೆಯ ಬಳಿ ಬೈಕಿಗೆ ಅಡ್ಡಲಾಗಿ ದನ ಸುಳಿದಿದ್ದು, ಇದರಿಂದ ಮಂಜುನಾಥ ನಾಯ್ಕರು ಬೆದರಿದರು. ಬೈಕಿನ ಮೇಲೆ ನಿಯಂತ್ರಣ ತಪ್ಪಿ ಅವರು ನೆಲಕ್ಕೆ ಬಿದ್ದರು.
ಪರಿಣಾಮ ಮಂಜುನಾಥ ನಾಯ್ಕ ಅವರಿಗೆ ಅಲ್ಪ ಪ್ರಮಾಣದ ಗಾಯವಾಗಿದ್ದು, ಅದೇ ಬೈಕಿನಲ್ಲಿ ಸಂಚರಿಸುತ್ತಿದ್ದ ಶ್ರೀಧರ ಗೊಂಡ ಅವರಿಗೆ ಹೆಚ್ಚಿನ ಪೆಟ್ಟಾಗಿದೆ. ಈ ಅಪಘಾತದಿಂದ ಶ್ರೀಧರ ಗೊಂಡ ಅವರು ಮುಖ, ಬಾಯಿ, ಕೈಗೆ ಗಾಯ ಮಾಡಿಕೊಂಡಿದ್ದಾರೆ.
`ವೇಗವಾಗಿ ಬೈಕ್ ಓಡಿಸಿದ್ದು ಸಹ ಈ ಅಪಘಾತಕ್ಕೆ ಕಾರಣ’ ಎಂದು ದುರ್ಗಯ್ಯನ ಮನೆಯ ಅಣ್ಣಪ್ಪ ಗೊಂಡ ಪೊಲೀಸರಿಗೆ ವರದಿ ಒಪ್ಪಿಸಿದರು. ಹೀಗಾಗಿ ಪೊಲೀಸರು ಮಂಜುನಾಥ ನಾಯ್ಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.



