ಹಳಿಯಾಳ: ಮನೆ ಬೀಗ ಒಡೆದು ಕಳ್ಳತನ ಮಾಡಿದ ನಂತರ ಆ ಮನೆಗೆ ಹೊಸ ಬೀಗ ಅಳವಡಿಸಿ ಪರಾರಿಯಾಗುವ ಕಳ್ಳರ ಗುಂಪು ಆಳ್ನಾವರ ಪ್ರವೇಶಿಸಿದೆ. ಹೀಗಾಗಿ ಅಲ್ಲಿಂದ 12ಕಿಮೀ ದೂರದ ಹಳಿಯಾಳದಲ್ಲಿಯೂ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ.
ಎರಡು ಬೈಕಿನಲ್ಲಿ ಬರುವ ಮೂರು ಜನ ಯಾರೂ ಇಲ್ಲದ ಮನೆಗಳನ್ನು ಗುರುತಿಸುತ್ತಾರೆ. ನಂತರ ಮನೆಯ ಬೀಗ ಒಡೆದು ಒಳಗೆ ಪ್ರವೇಶಿಸಿ ದರೋಡೆ ಮಾಡುತ್ತಾರೆ. ಮನೆಯಿಂದ ಹೊರ ಹೋಗುವಾಗ ಆ ಮನೆಗೆ ಹೊಸ ಬೀಗ ಅಳವಡಿಸಿ ಪರಾರಿಯಾಗುತ್ತಿದ್ದಾರೆ. ನಸುಕಿನ 2 ಗಂಟೆಯಿAದ 4 ಗಂಟೆ ಅವಧಿಯಲ್ಲಿ ಈ ಬಗೆಯ ಕಳ್ಳತನ ನಡೆಯುತ್ತಿದೆ. ಆಳ್ನಾವರದಿಂದ 20 ನಿಮಿಷದಲ್ಲಿ ಅವರು ಬೈಕಿನ ಮೂಲಕ ಹಳಿಯಾಳ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪೊಲೀಸರು ಈ ಬಗ್ಗೆ ಸಾರ್ವಜನಿಕರಿಗೂ ಎಚ್ಚರವಹಿಸುವಂತೆ ಸೂಚಿಸಿದ್ದಾರೆ.
`ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಕಂಡರೆ ಪೊಲೀಸರಿಗೆ ತಿಳಿಸಿ. ನಾಯಿ ಹೆಚ್ಚಿನ ಪ್ರಮಾಣದಲ್ಲಿ ಬೊಗಳುತ್ತಿದ್ದರೆ ಅದನ್ನು ಗಮನಿಸಿ. ಸಿಸಿ ಕ್ಯಾಮರಾ ಹಾಕಿಸುವುದರ ಜೊತೆ ಬೆಲೆ ಬಾಳುವ ಒಡವೆಗಳನ್ನು ಬ್ಯಾಂಕ್ ಲಾಕರ್’ನಲ್ಲಿರಿಸಿ. ಮನೆ ಬಿಟ್ಟು ಬೇರೆ ಕಡೆ ಹೋಗುವುದಿದ್ದರೆ ಪೊಲೀಸರಿಗೆ ಮುಂಚಿತ ಮಾಹಿತಿ ನೀಡಿ’ ಎಂಬ ಸಂದೇಶವನ್ನು ಪೊಲೀಸರು ರವಾನಿಸಿದ್ದಾರೆ.
#S News Digitel Advertisement: ನಿಮ್ಮ ಮನೆ-ತೋಟದ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸಿ. ಗುಣಮಟ್ಟದ ಸಿಸಿ ಕ್ಯಾಮರಾಗೆ ಇಲ್ಲಿ ಸಂಪರ್ಕಿಸಿ – 6362189206