ಶಿರಸಿ: ಬಿಸಿಲಕೊಪ್ಪದ ಚೌಡೇಶ್ವರಿ ಸ್ಟೂಡಿಯೋದಲ್ಲಿದ್ದ ಕ್ಯಾಮರಾ ಹಾಗೂ ಹಣ ಕಳ್ಳತನವಾಗಿದೆ. ಸ್ಟೂಡಿಯೋ ಹಿಂದಿನ ಗೋಡೆಗೆ ಅಳವಡಿಸಿದ್ದ ಮೆಸ್ ತೆಗೆದು ಒಳಗೆ ನುಗ್ಗಿದ ಕಳ್ಳರು ನಂತರ ಅಲ್ಲಿಂದಲೇ ಹೊರ ಹೋಗಿದ್ದಾರೆ.
ಶಿರಸಿ ಕುಪ್ಪಳ್ಳಿ ಬಂಕನಾಳದ ಉಮಾಕಾಂತ ನಾಯ್ಕ ಅವರು ಉತ್ತಮ ಫೋಟೋಗ್ರಾಫರ್. ಹೀಗಾಗಿ ಅವರು ಬಿಸಲಕೊಪ್ಪ ಗ್ರಾಮ ಪಂಚಾಯತ ಬಳಿ ಫೋಟೋ ಸ್ಟೂಡಿಯೋ ಹಾಕಿಕೊಂಡು ಬದುಕು ಕಟ್ಟಿಕೊಂಡಿದ್ದರು. ಮೋಹನ ಭಾಗ್ವತ ಅವರ ಕಟ್ಟಡದಲ್ಲಿ ಅವರು ಸ್ಟುಡಿಯೋ ನಡೆಸುತ್ತಿದ್ದರು. ಫೋಟೋ ತೆಗೆಯುವುದರ ಜೊತೆ ಜರಾಕ್ಸ್, ಲ್ಯಾಮಿನೇಶನ್, ಟಿವಿ-ಮೊಬೈಲ್ ರಿಚಾರ್ಜ ಸೇರಿ ಹಲವು ಬಗೆಯ ಸೇವೆಯನ್ನು ನೀಡುತ್ತಿದ್ದರು.
ಡಿ 22ರ ರಾತ್ರಿ 9 ಉಮಾಕಾಂತ ನಾಯ್ಕ ಅವರು ತಮ್ಮ ಸ್ಟೂಡಿಯೋ ಬಾಗಿಲು ಹಾಕಿ ಮನೆಗೆ ಹೋಗಿದ್ದರು. ಅವರ ವ್ಯವಹಾರ ನೋಡಿಕೊಂಡಿದ್ದ ಕಳ್ಳರು ಅದೇ ದಿನ ರಾತ್ರಿ ಕಟ್ಟಡದ ಹಿಂದೆ ಅಳವಡಿಸಿದ್ದ ಮೆಸ್ ತೆಗೆದು ಒಳ ನುಗ್ಗಿದರು. ಸ್ಟೂಡಿಯೋದಲ್ಲಿದ್ದ 45 ಸಾವಿರ ರೂ ಮೌಲ್ಯದ ಕ್ಯಾಮರಾ ಕದ್ದರು. ಅದಾದ ನಂತರ ಡ್ರಾವರಿನಲ್ಲಿದ್ದ 6 ಸಾವಿರ ರೂ ಹಣವನ್ನು ಅಪಹರಿಸಿದರು.
ಡಿ 23ರ ಬೆಳಗ್ಗೆ ಉಮಾಕಾಂತ ನಾಯ್ಕ ಅವರು ಸ್ಟೂಡಿಯೋಗೆ ಬಂದು ನೋಡಿದಾಗ ಡಿಎಸ್‌ಎಲ್‌ಆರ್ ಕ್ಯಾಮರಾ ಕಾಣಲಿಲ್ಲ. ಡ್ರಾವರಿನಲ್ಲಿದ್ದ ಹಣವೂ ಇರಲಿಲ್ಲ. ಅದಾದ ನಂತರ ಮೆಸ್ ತೆಗೆದಿರುವುದು ಗಮನಕ್ಕೆ ಬಂದಿದ್ದು, ಕಳ್ಳರ ಆಗಮನ ಖಚಿತವಾಗಿತ್ತು. ಕಳ್ಳರನ್ನು ಹುಡುಕಿ ಕಾಣೆಯಾದ ಹಣ-ಕ್ಯಾಮರಾ ಮರಳಿಸಿ ಎಂದು ಉಮಾಕಾಂತ ನಾಯ್ಕ ಅವರು ಪೊಲೀಸರ ಮೊರೆ ಹೋಗಿದ್ದಾರೆ.
#S News Digitel Advertisement: ನಿಮ್ಮ ಮನೆ-ತೋಟ-ಮಳಿಗೆ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸಿ. ಗುಣಮಟ್ಟದ ಕ್ಯಾಮರಾಗಳಿಗೆ ಇಲ್ಲಿ ಸಂಪರ್ಕಿಸಿ – 6362189206