ಅಂಕೋಲಾ: ಹಾರವಾಡದ ರೈಲು ನಿಲ್ದಾಣದ ಬಳಿ ನಡೆದು ಹೋಗುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ ಹೊಡೆದಿದ್ದು, ಸೋಮು ಗೌಡ ಎಂಬಾತರು ಸಾವನಪ್ಪಿದ್ದಾರೆ. ಜೊತೆಗೆ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.
ಡಿ 23ರಂದು ಕಾರವಾರ ಬಾಡ ಬಳಿಯ ಕೊಂಕಣ ಖಾರ್ವಿವಾಡದ ವಿಶಾಲ ಬಾನಾವಳಿ ಅಂಕೋಲಾ ಕಡೆಯಿಂದ ಕಾರವಾರ ಕಡೆ ಜೋರಾಗಿ ಕಾರು ಓಡಿಸುತ್ತಿದ್ದರು. ಆ ಕಾರಿನಲ್ಲಿ ಮಹಾರಾಷ್ಟದ ದೀಪಕ ದೇಸಾಯಿ ಹಾಗೂ ಪ್ರಿಯಾ ದೇಸಾಯಿ ಕುಳಿತಿದ್ದರು. ಹಾರವಾಡ ರೈಲು ನಿಲ್ದಾಣದ ಬಳಿ ನಡೆದು ಹೋಗುತ್ತಿದ್ದ ಸೋಮು ಬಾಬು ಗೌಡ (50) ಅವರಿಗೆ ವಿಶಾಲ ಬಾನಾವಳಿ ತಾವು ಚಲಿಸುತ್ತಿದ್ದ ಕಾರು ಗುದ್ದಿದರು.
ಕಾರು ಗುದ್ದಿದ ರಭಸಕ್ಕೆ ಸೊಮು ಗೌಡ ಬಹುದೂರ ಹಾರಿ ಬಿದ್ದರು. ಹಣೆ, ಕೈ-ಕಾಲುಗಳಿಗೆ ಗಾಯ ಮಾಡಿಕೊಂಡಿದ್ದ ಸೊಮು ಗೌಡ ಅಲ್ಲಿಯೇ ಕೊನೆ ಉಸಿರೆಳೆದರು. ಕಾರು ಚಾಲಕನ ನಿಯಂತ್ರಣ ತಪ್ಪಿದ ಕಾರಣ ಕಾರಿನ ಒಳಗಿದ್ದ ದೀಪಕ ದೇಸಾಯಿ ಹಾಗೂ ಪ್ರಿಯಾ ದೇಸಾಯಿ ಜೊತೆ ಚಾಲಕ ವಿಶಾಲ ಬಾನಾವಳಿ ಸಹ ಗಾಯಗೊಂಡರು.
ಈ ಅಪಘಾತದ ಬಗ್ಗೆ ಅಮದಳ್ಳಿಯ ಕುಮಾರ ಗೌಡ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.