ಸಿದ್ದಾಪುರ: ಅಡಿಕೆ ಮರ ಹತ್ತಿ ಕೊನೆ ಕೊಯ್ಲು ನಡೆಸುತ್ತಿದ್ದ ಗಣಪತಿ ಗೌಡ ಮರದಿಂದ ನೆಲಕ್ಕೆ ಅಪ್ಪಳಿಸಿ ಸಾವನಪ್ಪಿದ್ದಾರೆ.
ಮತ್ತಿಗಾರ ಬಳಿಯ ಈಜಲಬೆಟ್ಟದ ಗಣಪತಿ ಗೌಡ (50) ಅವರು ಡಿ 27ರಂದು ಸರಕುಳಿಯ ಗೌರಿ ಗೌಡ ಅವರ ತೋಟಕ್ಕೆ ಹೋಗಿದ್ದರು. ಅಡಿಕೆ ಕೊಯ್ಲು ಮಾಡುವುದಕ್ಕಾಗಿ ಅವರು ಮರ ಏರಿದ್ದರು. ಮಧ್ಯಾಹ್ನದ ವೇಳೆಗೆ ಅಡಿಕೆ ಮರ ಹತ್ತಿ ಇನ್ನೊಂದು ಅಡಿಕೆ ಮರವನ್ನು ಎಳೆದು ಕೊನೆ ಕೊಯ್ಲು ಮಾಡಲು ಪ್ರಯತ್ನಿಸಿದ್ದರು. ಈ ವೇಳೆ ಅವರು ಏರಿದ ಅಡಿಕೆ ಮರ ಎರಡು ತುಂಡಾಗಿದೆ.
ಅಡಿಕೆ ಮರ ತುಂಡಾಗಿದ್ದರಿoದ ನೆಲಕ್ಕೆ ಬಿದ್ದ ಗಣಪತಿ ಗೌಡ ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಅವರನ್ನು ಶಿರಸಿಯ ಪಿ ಜಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಯಿತು. ಆದರೆ, ದಾರಿ ಮದ್ಯೆಯೇ ಅವರು ಕೊನೆ ಉಸಿರೆಳೆದರು. ಗಣಪತಿ ಅವರ ಪತ್ನಿ ಮಹಾಲಕ್ಷಿ ಗೌಡ ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.



