ಅಂಕೋಲಾ: ಅಂಚೆ ಕಚೇರಿ ಹಾಗೂ ಜೈ ಹಿಂದ್ ಹೈಸ್ಕೂಲ್ ಎದುರಿನ ಗೂಡಂಗಡಿ ವಿಚಾರವಾಗಿ ಪಟ್ಟಣದಲ್ಲಿ ಗೊಂದಲ ಸೃಷ್ಟಿಯಾಗಿದೆ. ಎರಡು ಬಣಗಳ ವಾಗ್ವಾದದಿಂದಾಗಿ ಅಧಿಕಾರಿಗಳು ಮೌನವಾಗಿದ್ದಾರೆ. ಮಂಗಳವಾರ ಇದೇ ವಿಷಯವಾಗಿ ಮಾತಿನ ಚಕಮಕಿ ನಡೆದಿದ್ದು, ಕೊನೆಗೂ ವಿಷಯ ಬಗೆಹರಿಯಲಿಲ್ಲ!
`ಗೂಡಂಗಡಿಯಿoದಾಗಿ ರಿಕ್ಷಾ ನಿಲ್ದಾಣಕ್ಕೆ ಸಮಸ್ಯೆಯಾಗಿದೆ’ ಎಂಬುದು ರಿಕ್ಷಾ ಚಾಲಕರ ದೂರು. `ಗೂಡಂಗಡಿಯಿAದಲೇ ನಾವು ಬದುಕು ಕಟ್ಟಿಕೊಂಡಿದ್ದೇವೆ’ ಎಂಬುದು ಅಂಗಡಿಕಾರರ ಅಳಲು. `ಗೂಡಂಗಡಿ ತೆರವು ಮಾಡಿ’ ಎಂದು ರಿಕ್ಷಾ ಚಾಲಕರು ಆಗ್ರಹಿಸಿದರೆ `ನಮಗೂ ಬದುಕಲು ಬಿಡಿ’ ಎಂದು ಅಂಗಡಿಕಾರರು ಒತ್ತಾಯಿಸಿದ್ದಾರೆ. ಈ ಹಗ್ಗ ಜಗ್ಗಾಟ ಆಡಳಿತದಲ್ಲಿರುವವರ ತಲೆನೋವಿಗೂ ಕಾರಣವಾಗಿದೆ.
`ಹೊಸದಾಗಿ ನಿರ್ಮಿಸಿದ ಗೂಡಂಗಡಿ ತೆರವು ಮಾಡಬೇಕು’ ಎಂದು ರಿಕ್ಷಾ ಚಾಲಕರು ತಹಶೀಲ್ದಾರ್, ಪೊಲೀಸರು ಹಾಗೂ ಪುರಸಭೆಗೆ ಮನವಿ ಸಲ್ಲಿಸಿದ್ದಾರೆ. ಗೂಡಂಗಡಿ ತೆರವು ಮಾಡದಿರಲು ಕಾರಣಗಳ ಬಗ್ಗೆಯೂ ಪ್ರಶ್ನಿಸಿದ್ದಾರೆ. ಈ ವೇಳೆ ಕೆಲವರು ಗೂಡಂಗಡಿ ಪರವಾಗಿ ಮಾತನಾಡಿದ್ದು, `ಬಡವರ ಹೊಟ್ಟೆಯ ಮೇಲೆ ಹೊಡೆಯದಿರಿ’ ಎಂದು ಕೆಲ ಜನಪ್ರತಿನಿಧಿಗಳು ಹೇಳಿದ್ದಾರೆ. ಇದೇ ಕಾರಣದಿಂದ ಗೂಡಗಂಡಿ ತೆರವು ಮಾಡಿಲ್ಲ ಎಂಬುದು ಅಧಿಕಾರಿಗಳ ಮಾತು.
`ಗೂಡಂಗಡಿಕಾರರ ಮೇಲೆ ನಮಗೆ ದ್ವೇಷವಿಲ್ಲ. ಪುರಸಭೆ ಅವರಿಗೆ ಬೇರೆ ಜಾಗ ಗುರುತಿಸಲಿ’ ಎಂದು ಕೆಲ ರಿಕ್ಷಾ ಚಾಲಕರು ಹೇಳಿದರು. `ಸಣ್ಣಪುಟ್ಟ ಸಮಸ್ಯೆಯನ್ನು ದೊಡ್ಡದು ಮಾಡುವುದು ಬೇಡ’ ಎಂದು ಗೂಡಂಗಡಿಕಾರರು ಹೇಳಿದರು. `ಗೂಡಂಗಡಿ ಹೆಸರಿನಲ್ಲಿ ಜಾಗ ಕಬಳಿಕೆ ಆಗಬಾರದು’ ಎಂದು ಸಹ ಕೆಲವರು ಮಾತನಾಡಿಕೊಂಡರು.
ಗೂಡAಗಡಿ ಗೊಂದಲ ಹಾಗೇ ಮುಂದುವರೆದಿದ್ದು, ಮಂಗಳವಾರ ನಡೆದ ವಾಗ್ವಾದ-ಗೊಂದಲ ಅಂತಿಮ ರೂಪ ಪಡೆದಿಲ್ಲ. ಸಮಸ್ಯೆ ಹಾಗೇ ಉಳಿದಿದ್ದು ಅದನ್ನು ಬಗೆಹರಿಸುವುದಕ್ಕಾಗಿ ಪುರಸಭೆಯೂ ಹಲವರ ಮನವೊಲೈಸುವ ಪ್ರಯತ್ನ ನಡೆಸಿದೆ.