ಶಿರಸಿ: ತಾಮೀರ ಕೋ ಆಪ್ ಬ್ಯಾಂಕ್ ಎದುರು ಚಲಿಸುತ್ತಿದ್ದ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಚಲಿಸುತ್ತಿದ್ದ ಕಾರನ್ನು ತಕ್ಷಣ ನಿಲ್ಲಿಸಿದ ಚಾಲಕ ಅಗ್ನಿ ಅವಘಡ ತಡೆದಿದ್ದಾರೆ.
ಶಿರಸಿ – ಹುಬ್ಬಳ್ಳಿ ರಸ್ತೆಯಲ್ಲಿ ಗುರುವಾರ ಸಂಜೆ ಶಿಪ್ಟ ಕಾರು ಚಲಿಸುತ್ತಿತ್ತು. ವಾಹನದ ಮುಂದಿನಿAದ ಹೊಗೆ ಬಂದಿರುವುದನ್ನು ನೋಡಿದ ಚಾಲಕ ಕಾರನ್ನು ರಸ್ತೆ ಅಂಚಿನಲ್ಲಿ ನಿಲ್ಲಿಸಿದರು. ಹೊಗೆ ಬರಲು ಕಾರಣ ಗೊತ್ತಾಗಲಿಲ್ಲ. ಕಾರಿನಿಂದ ಹೊಗೆ ಬರುತ್ತಿರುವುದನ್ನು ನೋಡಿ ಅನೇಕರು ಅಲ್ಲಿ ಜಮಾಯಿಸಿದರು.
ಈ ವೇಳೆ ಅಲ್ಲಿದ್ದವರು ನೀಡಿದ ಸಲಹೆ ಮೇರೆಗೆ ಕಾರು ಚಾಲಕ ತುರ್ತು ಕ್ರಮ ಜರುಗಿಸಿದ್ದು, ಅಪಾಯವನ್ನು ತಡೆದರು. ಬ್ಯಾಟರಿ ಶಾರ್ಟ ಆಗಿದ್ದರಿಂದ ಹೊಗೆ ಬಂದ ಬಗ್ಗೆ ಹೇಳಲಾಗಿದ್ದರೂ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಈಚೆಗೆ ಚಲಿಸುತ್ತಿರುವ ವಾಹನಗಳಿಗೆ ಬೆಂಕಿ ಬೀಳುವ ಪ್ರಮಾಣ ಹೆಚ್ಚಾಗಿದ್ದು, ಸ್ಪಷ್ಟ ಕಾರಣ ಮಾತ್ರ ಗೊತ್ತಾಗುತ್ತಿಲ್ಲ.



