ಸಿದ್ದಾಪುರ: ಈಸೀ ಲೈಫ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಗೌತಮ್ ಹೆಗಡೆ ಅವರು ಮನೆ ಬಿಟ್ಟು ಹೋಗಿದ್ದಾರೆ. ತಂಗಿ ವೀಣಾ ಜೊತೆ ಜಗಳ ಮಾಡಿದ ನಂತರ ಅವರು ಮನೆಬಿಟ್ಟು ತೆರಳಿದ್ದು, ಮೂರು ದಿನವಾದರೂ ಮರಳಿ ಬಂದಿಲ್ಲ. ಆತಂಕಕ್ಕೆ ಒಳಗಾದ ಕುಟುಂಬದವರು ಇದೀಗ ಅವರ ಹುಡುಕಾಟಕ್ಕಾಗಿ ಪೊಲೀಸರ ನೆರವು ಯಾಚಿಸಿದ್ದಾರೆ.
ಹೊಸಕೊಪ್ಪ ಮುಟ್ಟಳ್ಳಿಯ ಕರ್ಕಿಸೌಲು ಊರಿನ ಗೌತಮ ಹೆಗಡೆ ಅವರು ಸಿದ್ದಾಪುರದ ಕೊಂಡ್ಲಿ ಬಳಿ ವಾಸವಾಗಿದ್ದರು. ಗೌತಮ ಹೆಗಡೆ ಸ್ವಲ್ಪ ಸಿಡುಕು ಸ್ವಭಾವದರಾಗಿದ್ದರು. ಡಿ 31ರ ರಾತ್ರಿ ಅವರು ತಮ್ಮ ತಂಗಿ ವೀಣಾ ಅವರ ಮಗಳ ಜೊತೆ ಮಾತನಾಡುತ್ತಿದ್ದರು. ಆಗ, ವೀಣಾ ಅವರು ಮಗಳನ್ನು ಉದ್ದೇಶಿಸಿ `ನೀನು ಯಾರ ಮಾತು ಕೇಳಬೇಡ’ ಎಂದಿದ್ದರು.
ಇದರಿoದ ಸಿಟ್ಟಾದ ಗೌತಮ ಹೆಗಡೆ ತಮ್ಮ ಕೈಯಲಿದ್ದ ಮೊಬೈಲನ್ನು ಅಲ್ಲಿಯೇ ಬಿಸಾಡಿದರು. ತಂಗಿಯ ಬಳಿ ದೊಡ್ಡದಾಗಿ ಜಗಳ ಮಾಡಿದರು. ಅದಾದ ನಂತರ ಗೌತಮ ಅವರ ತಾಯಿ ಕಲಾವತಿ ಹೆಗಡೆ ಅವರನ್ನು ಸಮಾದಾನ ಮಾಡುವ ಪ್ರಯತ್ನ ನಡೆಸಿದರು. ಅದಾಗಿಯೂ ಕೇಳದೇ ರಾತ್ರಿ ವೇಳೆ ಮನೆ ಬಿಟ್ಟು ಹೋದರು.
ಗೌತಮ ಅವರ ವರ್ತನೆಯಿಂದ ಆತಂಕಕ್ಕೆ ಒಳಗಾದ ಕುಟುಂಬದವರು ಅವರ ಸ್ನೇಹಿತರಲ್ಲಿ ವಿಚಾರಿಸಿದರು. ಸಂಬAಧಿಕರ ಮನೆಯಲ್ಲಿ ಹುಡುಕಾಡಿದರು. ಆದರೆ, ಅವರು ಎಲ್ಲಿಯೂ ಕಾಣಲಿಲ್ಲ. ಹೀಗಾಗಿ `ಗೌತಮ ಹೆಗಡೆ ಅವರನ್ನು ಹುಡುಕಿಕೊಡಿ’ ಎಂದು ಅವರ ತಾಯಿ ಕಲಾವತಿ ಹೆಗಡೆ ಪೊಲೀಸ್ ದೂರು ನೀಡಿದ್ದಾರೆ.





